×
Ad

ಉತ್ತರಪ್ರದೇಶ: ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ಐಐಟಿ ಆಕಾಂಕ್ಷಿ ಆತ್ಮಹತ್ಯೆ

Update: 2023-10-24 21:20 IST

ಬಲಿಯಾ: ರಾಜಸ್ಥಾನದ ಕೋಟಾದಲ್ಲಿ ಐಐಟಿ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ 20 ವರ್ಷದ ವಿದ್ಯಾರ್ಥಿ ಇಲ್ಲಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿದ್ಯಾರ್ಥಿ ರೋಷನ್ ಸೋಮವಾರ ರಾತ್ರಿ ದೇವಕಿ ಛಾಪ್ರಾ ಗ್ರಾಮದಲ್ಲಿರುವ ತನ್ನ ಮನೆಯ ವರಾಂಡದಲ್ಲಿ ಕುಟುಂಬದ ಸದಸ್ಯರೊಂದಿಗೆ ಮಲಗಿದ್ದ. ಎಲ್ಲರಿಗೂ ಗಾಢ ನಿದ್ರೆ ಆವರಿಸಿದ ಬಳಿಕ ಆತ ತನ್ನ ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

12ನೇ ತರಗತಿ ಉತ್ತೀರ್ಣನಾದ ಬಳಿಕ ರೋಷನ್ ಕೋಟಾಕ್ಕೆ ತೆರಳಿ ಐಐಟಿ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ರಜೆಯ ಹಿನ್ನೆಲೆಯಲ್ಲಿ ಆತ ಊರಿಗೆ ಬಂದಿದ್ದ. ರೋಷನ್ ಆತ್ಮಹತ್ಯೆ ಮಾಡಿಕೊಂಡ ಕುರಿತು ಕುಟುಂಬದವರಿಗೆ ಮರುದಿನ ತಿಳಿಯಿತು ಎಂದು ಪೊಲೀಸರು ಹೇಳಿದ್ದಾರೆ.

ರೋಷನ್ ಕಳೆದ ಕೆಲವು ದಿನಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದ. ಅಲ್ಲದೆ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಎಂದು ಅವರ ಕುಟುಂಬ ತಿಳಿಸಿದೆ.

ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಎಸ್ಎಚ್ಒ ಧರ್ಮ ವೀರ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News