ವಿಶ್ವಪರಂಪರೆಯ ತಾಣಗಳ ಸಂಭಾವ್ಯ ಪಟ್ಟಿಗೆ ಭಾರತದ 6 ಸ್ಥಳಗಳ ಸೇರ್ಪಡೆ
ವಿಶ್ವಪರಂಪರೆಯ ತಾಣಗಳ ಸಂಭಾವ್ಯ ಪಟ್ಟಿಗೆ ಭಾರತದ 6 ಸ್ಥಳಗಳ ಸೇರ್ಪಡೆ (Va/ಫೇ)
ಹೊಸದಿಲ್ಲಿ : ವಿವಿಧ ರಾಜ್ಯಗಳಲ್ಲಿರುವ ಚಕ್ರವರ್ತಿ ಅಶೋಕನ ಶಿಲಾ ಶಾಸನಗಳು ಹಾಗೂ ಚೌಸತ್ ಯೋಗಿನಿ ದೇವಾಲಯಗಳನ್ನು ಯುನೆಸ್ಕೋದ ವಿಶ್ವಪರಂಪರೆ ಕೇಂದ್ರದ ಸಂಭಾವ್ಯ ಪಟ್ಚಿಗೆ ಭಾರತವು ಸೇರ್ಪಡೆಗೊಳಿಸಿದೆ.ಈ ತಾಣಗಳನ್ನು ಮಾರ್ಚ್ 7ರಂದು ಸಂಭಾವ್ಯ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆಯೆಂದು ಯುನೆಸ್ಕೊದಲ್ಲಿನ ಭಾರತದ ಖಾಯಂ ನಿಯೋಗ ಹೇಳಿಕೆಯೊಂದರಲ್ಲಿ ತಿಳಿಸಿದೆ.
ನಿಯಮಗಳ ಪ್ರಕಾರ ಒಂದು ವೇಳೆ ಯಾವುದೇ ಯಾವುದೇ ತಾಣವು ಭವಿಷ್ಯದಲ್ಲಿ ವಿಶ್ವ ಪರಂಪರೆ ತಾಣವೆಂಬ ಮಾನ್ಯತೆ ಪಡೆಯಬೇಕಾದರೆ ಮೊದಲಿಗೆ ಅದು ‘ಯುನೆಸ್ಕೊ ವಿಶ್ವ ಪರಂಪರೆ ಕೇಂದ್ರ’ದ ಸಂಭಾವ್ಯ ಪಟ್ಟಿಗೆ ಸೇರ್ಪಡೆಗೊಳ್ಳುವುದು ಕಡ್ಡಾಯವಾಗಿರುತ್ತದೆ.
ಚತ್ತೀಸ್ ಗಡದಲ್ಲಿರುವ ಕಾಂಗೇರ್ ಕಣಿವೆ ರಾಷ್ಟ್ರೀಯ ಉದ್ಯಾನವನ.ತೆಲಂಗಾಣದ ಮುದುಮಲ್ ನಲ್ಲಿರುವ ಬೃಹತ್ ಶಿಲಾಯುಗದ ಬಂಡೆಗಳು, ವಿವಿಧ ರಾಜ್ಯಗಳಲ್ಲಿರುವ ಅಶೋಕ ಶಿಲಾಶಾಸನಗಳು, ವಿವಿಧ ರಾಜ್ಯಗಳಲ್ಲಿನ ಚೌಸತ್ ಯೋಗಿನಿ ದೇವಾಲಯಗಳು, ಉತ್ತರ ಭಾರತದ ಗುಪ್ತಾ ದೇವಾಲಯಗಳು ಹಾಗೂ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿರುವ ಬುಂದೇಲ್ಖಂಡ ಪ್ರಾಂತ್ಯದ ಅರಮನೆ-ಕೋಟೆಗಳು ಯುನೆಸ್ಕೊದ ಸಂಭಾವ್ಯ ವಿಶ್ವಪರಂಪರೆ ತಾಣಗಳ ಪಟ್ಟಿಗೆ ಭಾರತವು ಸೇರ್ಪಡೆಗೊಳಿಸಿದ ತಾಣಗಳಾಗಿವೆ.
ಇವುಗಳ ಸೇರ್ಪಡೆಯೊಂದಿಗೆ ಭಾರತವು ಪ್ರಸಕ್ತ 62 ತಾಣಗಳನ್ನು ಯುನೆಸ್ಕೊದ ಸಂಭಾವ್ಯ ವಿಶ್ವಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಿದಂತಾಗಿದೆ.