×
Ad

ಮುಂದಿನ ವಾರ ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಡಂಬಡಿಕೆ ಸಾಧ್ಯತೆ

Update: 2025-09-07 21:53 IST

ಇಸ್ರೇಲ್ ನ ಹಣಕಾಸು ಸಚಿವ ಬೆಝಲೆಲ್ ಸ್ಮೋಟ್ರಿಚ್ Photo Credit: Reuters

ಹೊಸದಿಲ್ಲಿ: ಈ ವಾರ ಇಸ್ರೇಲ್ ನ ಹಣಕಾಸು ಸಚಿವ ಬೆಝಲೆಲ್ ಸ್ಮೋಟ್ರಿಚ್ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ, ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಡಂಬಡಿಕೆಗೆ ಸಹಿ ಬೀಳುವ ನಿರೀಕ್ಷೆ ಇದೆ. ಆ ಮೂಲಕ, ಎರಡೂ ದೇಶಗಳ ನಡುವಿನ ವ್ಯಾಪಾರಕ್ಕೆ ಉತ್ತೇಜನ ನೀಡಲು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಡಿಗಲ್ಲು ಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮುಂದಿನ ವಾರ ಸೆಪ್ಟೆಂಬರ್ 8ರಿಂದ ಸೆಪ್ಟೆಂಬರ್ 10ರ ನಡುವೆ ಇಸ್ರೇಲ್ ಹಣಕಾಸು ಸಚಿವ ಬೆಝಲೆಸ್ ಸ್ಮೋಟ್ರಿಚ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಲಿದ್ದಾರೆ.

ಇದಲ್ಲದೆ, ಅವರು ಮುಂಬೈ ಹಾಗೂ ಗಾಂಧಿನಗರದಲ್ಲಿರುವ ಗಿಫ್ಟ್ ಸಿಟಿಗೂ ಭೇಟಿ ನೀಡಲಿದ್ದಾರೆ.

“ದ್ವಿಪಕ್ಷೀಯ ಸಭೆಗಳ ಮೂಲಕ ಭಾರತ ಮತ್ತು ಇಸ್ರೇಲ್ ನಡುವಿನ ಆರ್ಥಿಕ ಹಾಗೂ ಹಣಕಾಸು ಸಂಬಂಧಗಳನ್ನು ಮತ್ತಷ್ಟು ಬಲಿಷ್ಠವಾಗಿಸುವುದು ಹಾಗೂ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಹಾಗೂ ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ಸಾಮಾನ್ಯ ನೆಲೆಯಲ್ಲಿ ಕೆಲವು ಪ್ರಮುಖ ಒಪ್ಪಂದಗಳಿಗೆ ವೇದಿಕೆ ಸಿದ್ಧಗೊಳಿಸುವುದು ಈ ಭೇಟಿಯ ಉದ್ದೇಶವಾಗಿದೆ” ಎಂದು ಇಸ್ರೇಲ್ ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News