×
Ad

ಅಮೆರಿಕ ವಿಧಿಸಿದ ಶೇಕಡ 10 ರ ಮೂಲ ಸುಂಕದಿಂದ ವಿನಾಯಿತಿ ಕೋರಿದ ಭಾರತ

Update: 2025-06-08 07:30 IST

ಹೊಸದಿಲ್ಲಿ: ಭಾರತದಿಂದ ಆಮದಾಗುವ ಎಲ್ಲ ಸರಕು ಮತ್ತು ಸೇವೆಗಳ ಮೇಲೆ ಟ್ರಂಪ್ ಆಡಳಿತ ಏಪ್ರಿಲ್ 2ರಿಂದ ಜಾರಿಯಾಗುವಂತೆ ವಿಧಿಸಿರುವ ಶೇಕಡ 10ರ ಮೂಲ ಸುಂಕದ ಭವಿಷ್ಯ ಉಭಯ ದೇಶಗಳ ನಡುವಿನ ಒಪ್ಪಂದ ಮಾತುಕತೆಯ ಪ್ರಧಾನ ಅಂಶವಾಗಲಿದೆ ಎಂದು ಈ ವಿಚಾರದ ಬಗ್ಗೆ ಅರಿವು ಇರುವ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ ಮತ್ತು ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಅನುಸರಿಸಿದ ಸೂತ್ರವನ್ನು ಅಮೆರಿಕದ ಸಂಧಾನಕಾರರು ಮುಂದಿಟ್ಟಿದ್ದು, ಈ ಸಲಹೆಯಂತೆ ಭಾರತ ಕೂಡಾ ಶೇಕಡ 10ರ ಸುಂಕ ವಿಧಿಸುವುದನ್ನು ಅನುಕರಿಸಬಹುದಾಗಿದೆ. ಆದರೆ ಭಾರತ ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಶೇಕಡ 10ರ ಮೂಲ ಸುಂಕ ರದ್ದತಿ ಮತ್ತು ಜುಲೈ 9ರಂದು ವಿಧಿಸಿರುವ ಹೆಚ್ಚುವರಿ ಶೇಕಡ 16ರಷ್ಟು ಸುಂಕವನ್ನು ರದ್ದುಪಡಿಸುವ ಭರವಸೆಯ ಒತ್ತಾಯವನ್ನು ಭಾರತದ ಸಂಧಾನಕಾರರು ಮುಂದಿಟ್ಟಿದ್ದಾರೆ.

ಅಮೆರಿಕದ ಸಹಾಯಕ ವ್ಯಾಪಾರ ಪ್ರತಿನಿಧಿ ಬ್ರಿಂಡನ್ ಲಿಂಚ್ ಅವರು ಅಮೆರಿಕದ ಪರ ಸಂಧಾನಕಾರರಾಗಿ ಐದನೇ ಸುತ್ತಿನ ಮಾತುಕತೆಗೆ ಭಾರತಕ್ಕೆ ಆಗಮಿಸಿದ್ದಾರೆ. ಅಮೆರಿಕದ ನಿಯೋಗ ಜೂನ್ 10ರ ವೇಳೆಗೆ ದೆಹಲಿಗೆ ಆಗಮಿಸುವ ನಿರೀಕ್ಷೆಯಿದ್ದು, ಈ ಹಿಂದೆ ನಿಗದಿಯಾಗಿದ್ದಕಿಂತ ಎರಡು ದಿನಗಳ ಭೇಟಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

"ಸಹಜವಾಗಿಯೇ ಭಾರತದ ಸರಕು ಮತ್ತು ಸೇವೆಗಳ ಮೇಲೆ ವಿಧಿಸಿರುವ ಶೇಕಡ 10ರ ಮೂಲ ಸುಂಕ ಮತ್ತು ಜುಲೈ 9ರಂದು ವಿಧಿಸಲು ಉದ್ದೇಶಿಸಿದ ಹೆಚ್ಚುವರಿ ಶೇಕಡ 16ರ ಸುಂಕ ಒಪ್ಪಂದ ಜಾರಿಗೆ ಬಂದ ದಿನದಿಂದಲೇ ಕೊನೆಗೊಳ್ಳಬೇಕು. ಅಮೆರಿಕ ವಿಧಿಸಿರುವ ಶೇಕಡ 26ರಷ್ಟು ಸುಂಕವನ್ನು ಆ ದೇಶ ಸಂಪೂರ್ಣ ರದ್ದುಮಾಡುವವರೆಗೂ ಪ್ರಮಾಣಾನುಸಾರ ಸುಂಕ ವಿಧಿಸುವ ಹಕ್ಕು ಭಾರತಕ್ಕೆ ಇರಬೇಕು ಎನ್ನುವುದು ಭಾರತದ ವಾದವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News