×
Ad

ನಕಲಿ ಕಾಲ್‌ಸೆಂಟರ್‌ಗಳ ಮೂಲಕ ಜಪಾನಿ ಪ್ರಜೆಗಳನ್ನು ವಂಚಿಸಿದ 6 ಮಂದಿಯ ಬಂಧನ

Update: 2025-05-29 21:49 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: ನಕಲಿ ಕಾಲ್‌ಸೆಂಟರ್‌ಗಳನ್ನು ನಡೆಸಿ ಜಪಾನಿ ಪ್ರಜೆಗಳನ್ನು ವಂಚಿಸಿದ ಆರೋಪದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ)ವು ಆರು ಮಂದಿಯನ್ನು ಬಂಧಿಸಿದೆ.

ಆಪರೇಷನ್ ಚಕ್ರ ಕಾರ್ಯಾಚರಣೆಯಡಿ ಸಿಬಿಐ ಅಧಿಕಾರಿಗಳು ಈ ನಕಲಿ ಕಾಲ್‌ ಸೆಂಟರ್‌ ಗಳನ್ನು ಭೇದಿಸಿದೆ. ಈ ಸೈಬರ್ ಕ್ರಿಮಿನಲ್‌ ಗಳ ಜಾಲದ ಸದಸ್ಯರನ್ನು ಹಾಗೂ ಅವರ ಸ್ಥಳಗಳನ್ನು ಗುರುತಿಸಲು ಸಿಬಿಐಡಿಯ ಜಪಾನ್‌ನ ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆ ಜೊತೆ ಸಿಬಿಐ ನಿಕಟವಾಗಿ ಕೆಲಸ ಮಾಡಿತ್ತು.

ಈ ನಕಲಿ ಕಾಲ್‌ಸೆಂಟರ್‌ಗಳು ಕಾರ್ಯಾಚರಿಸುವ ಸ್ಥಳಗಳನ್ನು ಗುರುತಿಸಿದ ಬಳಿಕ, ಸಿಬಿಐ ತಂಡಗಳು ದಿಲ್ಲಿ, ಹರ್ಯಾಣ ಹಾಗೂ ಉತ್ತರಪ್ರದೇಶದ 19 ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದ್ದವು. ಈ ಸಂದರ್ಭ ಗ್ಯಾಂಗ್‌ನ ಆರು ಮಂದಿ ಸದಸ್ಯರನ್ನು ಬಂಧಿಸಲಾಗಿದ್ದು, ಎರಡು ಅಕ್ರಮ ಕಾಲ್ ಸೆಂಟರ್‌ಗಳನ್ನು ಭೇಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳನ್ನು ದಿಲ್ಲಿಯ ಆಶು ಸಿಂಗ್, ಪಾಣಿಪತ್‌ನಕಿಲ್ ಘಾಖರ್, ಆಯೋಧಾದ ರೋಹಿತ್ ಮೌರ್ಯ, ಶುಭಂ ಜೈಸ್ವಾಲ್, ವಿವೇಕ್ ರಾಜ್ ಹಾಗೂ ವಾರಣಾಸಿ ಆದರ್ಶ ಕುಮಾರ್ ಎಂದು ಗುರುತಿಸಲಾಗಿದೆ.

ದಾಳಿ ನಡೆಸಿದ ಸ್ಥಳಗಳಿಂದ ಸಿಬಿಐ ಡಿಜಿಟಲ್ ಸಾಕ್ಷ್ಯಗಳು, ಉಪಕರಣಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News