×
Ad

ಜಾರ್ಖಂಡ್ | ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲರು ಬಲಿ, ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮ

Update: 2025-07-16 21:34 IST

PC : PTI

ರಾಂಚಿ,ಜು.16: ಜಾರ್ಖಂಡ್‌ ನ ಬೊಕಾರೋ ಜಿಲ್ಲೆಯಲ್ಲಿ ಬುಧವಾರ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಸಿ ಆರ್‌ ಪಿ ಎಫ್ ಯೋಧ ಹುತಾತ್ಮನಾಗಿದ್ದು,ಇಬ್ಬರು ಮಾವೋವಾದಿಗಳು ಬಲಿಯಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ಗೋಮಿಯಾ ಪೋಲಿಸ್ ಠಾಣಾ ವ್ಯಾಪ್ತಿಯ ಬಿರ್‌ಹೋರ್ಡೆರಾ ಅರಣ್ಯದಲ್ಲಿ ಬೆಳಗಿನ 5:30ರ ನಡುವೆ ಮಾವೋವಾದಿಗಳು ಮತ್ತು ಸಿ ಆರ್‌ ಪಿ ಎಫ್ ಸಿಬ್ಬಂದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು.

ಎನ್‌ಕೌಂಟರ್‌ ನಲ್ಲಿ ಭದ್ರತಾ ಪಡೆಗಳು ಇಬ್ಬರು ಮಾವೋವಾದಿಗಳನ್ನು ಹೊಡೆದುರುಳಿಸಿವೆ. ಸಿ ಆರ್‌ ಪಿ ಎಫ್‌ ನ ಕೋಬ್ರಾ ಬಟಾಲಿಯನ್‌ ನ ಓರ್ವ ಯೋಧ ಕೂಡ ಮೃತಪಟ್ಟಿದ್ದಾರೆ ಎಂದು ಐಜಿ(ಬೊಕಾರೋ ವಲಯ) ಕ್ರಾಂತಿಕುಮಾರ ಗಡಿದೇಸಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಬೊಕಾರೋ ಎಸ್‌ಪಿ ಹರ್ವಿಂದರ್ ಸಿಂಗ್ ನೀಡಿರುವ ಮಾಹಿತಿಯಂತೆ ಎನ್‌ ಕೌಂಟರ್ ಬಳಿಕ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News