×
Ad

Kerala | ಮೆದುಳು ಜ್ವರಕ್ಕೆ ಇನ್ನೋರ್ವ ಬಲಿ

Update: 2026-01-06 22:30 IST

ಸಾಂದರ್ಭಿಕ ಚಿತ್ರ | Photo Credit : freepik

ಕೋಝಿಕ್ಕೋಡ್, ಜ. 5: ಕೆಲವು ದಿನಗಳ ಅಂತರದ ಬಳಿಕ ಕೇರಳದಲ್ಲಿ ಮೆದುಳು ಜ್ವರದಿಂದ ಮತ್ತೊಂದು ಸಾವು ಸಂಭವಿಸಿರುವ ಪ್ರಕರಣ ಸೋಮವಾರ ವರದಿಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಕೋಝಿಕ್ಕೋಡ್ ಜಿಲ್ಲೆಯ ಪುದಿಯಂಗಾಡಿ ನಿವಾಸಿ ಸಚ್ಚಿದಾನಂದನ್ (72) ಎಂದು ಗುರುತಿಸಲಾಗಿದೆ.

ಮೆದುಳು ಜ್ವರದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸಚ್ಚಿದಾನಂದನ್ ಅವರನ್ನು ಕಳೆದ ವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ನಡೆಸಲಾದ ವೈದ್ಯಕೀಯ ಪರೀಕ್ಷೆಗಳಿಂದ ಅವರು ಸೋಂಕುಪೀಡಿತರಾಗಿರುವುದು ದೃಢಪಟ್ಟಿತ್ತು. ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿದ್ದು, ಸೋಮವಾರ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಸಚ್ಚಿದಾನಂದನ್ ಅವರಿಗೆ ಮೆದುಳು ಜ್ವರದ ಸೋಂಕು ಹೇಗೆ ತಗಲಿತು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News