ಕೇರಳ: ಮೆದುಳು ಸೋಂಕಿಗೆ ಮತ್ತೋರ್ವ ಬಲಿ
ಸಾಂದರ್ಭಿಕ ಚಿತ್ರ | PC : NDTV
ವಯನಾಡ್, ಸೆ. 6: ಕೋಝಿಕ್ಕೋಡ್ ನ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 45 ವರ್ಷದ ವ್ಯಕ್ತಿಯೋರ್ವ ಅಪರೂಪದ ಹಾಗೂ ಮಾರಕ ಮೆದುಳು ಸೋಂಕು ಅಮೀಬಿಕ್ ಮೆನಿಂಗೊ ಎನ್ಸೆಫಲಿಟಿಸ್‌ನಿಂದ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ರತೀಶ್ ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಸುಲ್ತಾನ್ ಬತ್ತೇರಿಯ ನಿವಾಸಿ. ಈತ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಕೂಡ ಬಳಲುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಈ ಮೆದುಳು ಸೋಂಕಿನ ಲಕ್ಷಣದ ಹಿನ್ನೆಲೆಯಲ್ಲಿ ಈಗ 11ಕ್ಕೂ ಅಧಿಕ ಮಂದಿ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಆಗಸ್ಟ್‌ನಲ್ಲಿ ಮೆದುಳು ಸೋಂಕಿನಿಂದ 3 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಅಮೀಬಿಕ್ ಇತ್ತೀಚೆಗೆ ಮೆನಿಂಗೊಎನ್ಸೆಫಲಿಟಿಸ್‌ಯ ಚಿಕಿತ್ಸೆಗೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಆರೋಗ್ಯ ಅಧಿಕಾರಿಗಳ ಪ್ರಕಾರ, ಕಲುಷಿತ ನೀರಿನಲ್ಲಿ ಈಜುವ ಅಥವಾ ಸ್ಥಾನ ಮಾಡುವ ಮೂಲಕ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್‌ನ ಸೋಂಕು ಉಂಟಾಗುತ್ತದೆ. ಕೇರಳದಾದ್ಯಂತ ಈ ವರ್ಷ 42 ಪ್ರಕರಣಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.