×
Ad

ಮಧ್ಯಪ್ರದೇಶ | ನ್ಯಾಯಾಧೀಶೆಗೆ ಕೊಲೆ ಬೆದರಿಕೆ ಪತ್ರ; 500 ಕೋಟಿ ರೂ. ನೀಡುವಂತೆ ಬೇಡಿಕೆ

Update: 2025-09-04 20:27 IST

  ಸಾಂದರ್ಭಿಕ ಚಿತ್ರ

ರೇವಾ,ಸೆ.4: ಐನೂರು ಕೋಟಿ ರೂ. ಹಣ ನೀಡುವಂತೆ ಇಲ್ಲದಿದ್ದಲ್ಲಿ ಹತ್ಯೆಗೈಯುವುದಾಗಿ ಬೆದರಿಕೆಯೊಡ್ಡುವ ಪತ್ರವೊಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ನ್ಯಾಯಾಧೀಶೆಯೊಬ್ಬರಿಗೆ ಬಂದಿದ್ದು, 500 ಕೋಟಿ ರೂ. ಹಣ ನೀಡುವಂತೆ ಬೇಡಿಕೆಯಿಡಲಾಗಿದೆ. ಇಲ್ಲದಿದ್ದಲ್ಲಿ ಅವರನ್ನು ಹತ್ಯೆಗೈಯುವುದಾಗಿ ಬೆದರಿಸಲಾಗಿದೆ.

ಉತ್ತರಪ್ರದೇಶದ ಗಡಿಗೆ ಸಮೀಪವಿರುವ ರೇವಾ ಜಿಲ್ಲೆಯ ತಿಯೊಂಧಾರ್ ನ್ಯಾಯಾಲಯದಲ್ಲಿ ನಿಯೋಜಿತರಾಗಿರುವ ಮೊದಲ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ಮೋಹಿನಿ ಭದೌರಿಯಾ ಅವರಿಗೆ ಬೆದರಿಕೆ ಪತ್ರ ಬಂದಿರುವುದಾಗಿ ಪೊಲೀಸ್ ಆಧೀಕ್ಷಕ

ವಿವೇಕ್ ಸಿಂಗ್ ಅವರು ತಿಳಿಸಿದ್ದಾರೆ.

ಬೆದರಿಕೆ ಪತ್ರ ಕಳುಹಿಸಿದಾತನು ತಾನೊಬ್ಬ ಕುಖ್ಯಾತ ಡಕಾಯಿತನೆಂಬುದಾಗಿ ಗುರುತಿಸಿಕೊಂಡಿದ್ದಾನೆ. ಒಂದು ವೇಳೆ ಹಣ ಪಾವತಿಸದೇ ಇದ್ದಲ್ಲಿ ಆಕೆಯನ್ನು ಕೊಲ್ಲುವುದಾಗಿ ಆತ ಪತ್ರದಲ್ಲಿ ಬೆದರಿಕೆ ಹಾಕಿದ್ದಾನೆ.ನ್ಯಾಯಾಧೀಶೆಯವರು ನೀಡಿದ ದೂರನ್ನು ಆಧರಿಸಿ, ಸುಹಾಗಿ ಠಾಣಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 308 (ಸುಲಿಗೆ)ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 1ನೆ ತಾರೀಕಿನ ಸಂಜೆಯೊಳಗೆ ನ್ಯಾಯಾಧೀಶೆಯು ಖುದ್ದಾಗಿ ಉತ್ತರಪ್ರದೇಶದ ಬಂಡಾ ಜಿಲ್ಲೆಯ ಬಾರಾಗಾ ಎಂಬಲ್ಲಿಗೆ ಹಣವನ್ನು ತರಬೇಕು ಎಂದು ಪತ್ರ ಬರೆದಾತನು ಶರ್ತವೊಡ್ಡಿದ್ದಾನೆ. ಪತ್ರ ಬರೆದ ಆರೋಪಿಯನ್ನು ಪ್ರಯಾಗ್‌ರಾಜ್ ಜಿಲ್ಲೆಯ ಲೋಹಗಡ ಗ್ರಾಮದ ನಿವಾಸಿ ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ತಾನು, ಡಕಾಯಿತ ಹನುಮಾನ್‌ ನ ತಂಡದ ಭಾಗವಾಗಿದ್ದೇನೆಂದು ಆತ ಪತ್ರದಲ್ಲಿ ಬರೆದಿದ್ದಾನೆ.

ಬೆದರಿಕೆ ಪತ್ರ ಬರೆದ ಆರೋಪಿಯನ್ನು ಬಂಧಿಸಲು ಪೊಲೀಸರ ತಂಡವೊಂದು ಉತ್ತರಪ್ರದೇಶಕ್ಕೆ ತೆರಳಿರುವುದಾಗಿ ಎಸ್.ಪಿ. ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News