×
Ad

Maharashtra | 3 ವರ್ಷಗಳಲ್ಲಿ 7 ಜಿಲ್ಲೆಗಳಲ್ಲಿ 14,526 ಮಕ್ಕಳು ಮೃತ್ಯು: ಸರಕಾರ

Update: 2025-12-12 21:12 IST

ಸಾಂದರ್ಭಿಕ ಚಿತ್ರ

ನಾಗಪುರ, ಡಿ. 12: ಮೂರು ವರ್ಷಗಳಲ್ಲಿ ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ 14,526 ಮಕ್ಕಳ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಪ್ರಕಾಶ್ ಅಬಿತ್ಕರ್ ಶುಕ್ರವಾರ ವಿಧಾನಸಭೆಗೆ ತಿಳಿಸಿದರು.

ಬಿಜೆಪಿ ಶಾಸಕಿ ಸ್ನೇಹಾ ದುಬೆ ಅವರು ಎತ್ತಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಅಬಿತ್ಕರ್ ಸರಕಾರದ ದತ್ತಾಂಶವನ್ನು ಹಂಚಿಕೊಂಡರು. 2022-23 ಹಾಗೂ 2024-25ರ ನಡುವೆ ಪುಣೆ, ಮುಂಬೈ, ಛತ್ರಪತಿ ಸಂಭಾಜಿನಗರ್, ನಾಗಪುರ, ಅಮರಾವತಿ, ಅಕೋಲಾ ಹಾಗೂ ಯುವತ್ಮಾಲ್ ಜಿಲ್ಲೆಗಳಲ್ಲಿ ಒಟ್ಟು 14,526 ಮಕ್ಕಳು ಮೃತಪಟ್ಟಿರುವುದು ವರದಿಯಾಗಿದೆ ಎಂದು ಅಬಿತ್ಕರ್ ತಿಳಿಸಿದರು.

ಈ ಅಂಕಿ-ಅಂಶ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾದ ಶಿಶುಗಳು ಹಾಗೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಅಲ್ಲದೆ, ತೀವ್ರ ಅಪೌಷ್ಠಿಕತೆಯ ಪ್ರಕರಣಗಳನ್ನು ಒಳಗೊಂಡಿದೆ. ಬುಡಕಟ್ಟು ಪ್ರಾಬಲ್ಯದ ಪಾಲ್ಘಾರ್ ಜಿಲ್ಲೆಯಲ್ಲಿ 138 ಶಿಶುಗಳು ಸಾವನ್ನಪ್ಪಿರುವುದು ದಾಖಲಾಗಿದೆ. ಎಂದು ಸಚಿವರು ತಿಳಿಸಿದರು.

2025 ನವೆಂಬರ್ ವರೆಗಿಗೆ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶವನ್ನು ಉಲ್ಲೇಖಿಸಿ ಅಬಿತ್ಕರ್, ತೀವ್ರ ಅಪೌಷ್ಠಿಕತೆಯ 203 ಮಕ್ಕಳು ಹಾಗೂ ಸಾಧಾರಣ ಅಪೌಷ್ಠಿಕತೆಯ 2,666 ಮಕ್ಕಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ. 0.3 ದಾಖಲಾಗಿದ್ದರೆ, ಮಧ್ಯಮ ತೂಕದ ಮಕ್ಕಳ ಪ್ರಮಾಣ ಶೇ. 1.48 ದಾಖಲಾಗಿದೆ ಎಂದು ಅಬಿತ್ಕರ್ ಹೇಳಿದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News