ಮಣಿಪುರ | 48 ಗಂಟೆ ಬಂದ್ ನಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತ
Update: 2025-05-22 21:11 IST
ಸಾಂದರ್ಭಿಕ ಚಿತ್ರ
ಇಂಫಾಲ: ಸರಕಾರಿ ಬಸ್ ವೊಂದರಿಂದ ಮಣಿಪುರದ ಹೆಸರನ್ನು ತೆಗೆದಿರುವುದನ್ನು ವಿರೋಧಿಸಿ ಮೆತೈ ಸಮುದಾಯದ ಜನರ ಸಂಘಟನೆ ಕೋರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ್ ಇಂಟಗ್ರಿಟಿ (ಕೋಕೊಮಿ) ನೀಡಿರುವ 48 ಗಂಟೆಗಳ ಬಂದ್ ಕರೆಯ ಹಿನ್ನೆಲೆಯಲ್ಲಿ, ಗುರುವಾರ ಇಂಫಾಲ್ ಕಣಿವೆಯ ಐದು ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಎಲ್ಲಾ ವಾಣಿಜ್ಯ ಮಳಿಗೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಿ ಮತ್ತು ಖಾಸಗಿ ಕಚೇರಿಗಳು ಮುಚ್ಚಿದ್ದವು ಮತ್ತು ಸಾರ್ವಜನಿಕ ವಾಹನಗಳು ರಸ್ತೆಗಿಳಿಯಲಿಲ್ಲ.
ಇಂಫಾಲ ಪೂರ್ವ ಜಿಲ್ಲೆಯ ವಾಂಗ್‌ಖೇಯ್, ಖುರೈ ಮತ್ತು ಕೊಂಗ್ಬ ಪ್ರದೇಶಗಳು ಹಾಗೂ ಇಂಫಾಲ ಪಶ್ಚಿಮ ಜಿಲ್ಲೆಯ ಕ್ವಾಕೀತೆಲ್, ಮತ್ತು ನವೊರೆಮ್ ತೊಂಗ್ ಪ್ರದೇಶಗಳಲ್ಲಿ ಬಂದ್ ಬೆಂಬಲಿಗರು ರಸ್ತೆಗಿಳಿದು ಬಂದ್ ಜಾರಿಗೊಳಿಸಿದರು. ಬಂದ್ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.