ಆಗ್ರಾ ಬಳಿ ಮಿಗ್ 29 ಫೈಟರ್ ಜೆಟ್ ಪತನ
Update: 2024-11-04 18:32 IST
PC : (X/PTI)
ಲಕ್ನೋ : ಭಾರತೀಯ ವಾಯುಪಡೆಯ MiG-29 ಫೈಟರ್ ಜೆಟ್ ಸೋಮವಾರ ಆಗ್ರಾ ಬಳಿ ಪತನಗೊಂಡಿದೆ.
"ಐಎಎಫ್ನ ಮಿಗ್ -29 ವಿಮಾನವು ಇಂದು ತನ್ನ ದಿನನಿತ್ಯದ ತರಬೇತಿಯ ಸಮಯದಲ್ಲಿ ಆಗ್ರಾ ಬಳಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಪತನಗೊಂಡಿದೆ. ಪತನಕ್ಕೂ ಮುನ್ನ ಜನರಿಗೆ, ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಪೈಲೆಟ್ ಎಚ್ಚರ ವಹಿಸಿದ್ದಾರೆ. ಅಪಘಾತದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ” ಎಂದ ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 2 ರಂದು ರಾಜಸ್ಥಾನದ ಬಾರ್ಮರ್ ಬಳಿ ಮಿಗ್-29 ಯುದ್ಧ ವಿಮಾನ ಪತನಗೊಂಡಿತ್ತು.