×
Ad

ಹೈದರಾಬಾದ್: ಕೆ.ಕವಿತಾ ಕುರಿತು ಹೇಳಿಕೆಗಾಗಿ ಶಾಸಕನ ಕಚೇರಿಗೆ ದಾಳಿ,ಗುಂಡೇಟಿನಿಂದ ಓರ್ವನಿಗೆ ಗಾಯ

Update: 2025-07-13 20:58 IST

PC: X \ @Bavazir_network

ಹೈದರಾಬಾದ್: ತಿನ್ಮಾರ್ ಮಲ್ಲನ್ನ ಎಂದೇ ಜನಪ್ರಿಯರಾಗಿರುವ ಶಾಸಕ ಚಿಂತಪಂಡು ನವೀನ್ ಕುಮಾರ್ ಅವರ ಇಲ್ಲಿಯ ಕಚೇರಿಯ ಮೇಲೆ ರವಿವಾರ ದಾಳಿ ನಡೆಸಿದ ಪ್ರತಿಭಟನಾಕಾರರನ್ನು ಚದುರಿಸಲು ಅವರ ಗನ್‌ ಮ್ಯಾನ್ ಗುಂಡು ಹಾರಿಸಿದ ಬಳಿಕ ಸ್ಥಳದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು.

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್ ಶಾಸಕಿ ಕೆ.ಕವಿತಾ ಅವರೊಂದಿಗೆ ಗುರುತಿಸಿಕೊಂಡಿರುವ ಸಾಂಸ್ಕೃತಿಕ ಘಟಕ ತೆಲಂಗಾಣ ಜಾಗ್ರತಿಯ ಕಾರ್ಯಕರ್ತರೆನ್ನಲಾದ ಪ್ರತಿಭಟನಾಕಾರರು ಕವಿತಾ ವಿರುದ್ಧ ಮಲ್ಲನ್ನರ ಇತ್ತೀಚಿನ ಟೀಕೆಗಳನ್ನು ಖಂಡಿಸಲು ಅವರ ಕಚೇರಿಯೆದುರು ಜಮಾಯಿಸಿದ್ದರು.

ಪೋಲಿಸ್ ಮೂಲಗಳ ಪ್ರಕಾರ ಜಾಗ್ರತಿ ಕಾರ್ಯಕರ್ತರು ಕಚೇರಿ ಆವರಣದಲ್ಲಿ ದಾಂಧಲೆ ನಡೆಸಿದ ಬಳಿಕ ಪರಿಸ್ಥಿತಿಯು ಹಿಂಸಾರೂಪಕ್ಕೆ ತಿರುಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಶಾಸಕರ ಗನ್‌ ಮ್ಯಾನ್ ಜನರ ಗುಂಪನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದರು.

ಜಾಗ್ರತಿ ಕಾರ್ಯಕರ್ತ ಸಾಯಿ ಎಂಬಾತ ಗುಂಡೇಟಿನಿಂದ ಗಾಯಗೊಂಡಿದ್ದಾನೆ ಎಂದು ಕವಿತಾರ ಕಚೇರಿಯು ತಿಳಿಸಿದೆ.

ಕಾಂಗ್ರೆಸ್ ಮಾಜಿ ನಾಯಕ ಮಲ್ಲನ್ನ ಅವರು, ಅತ್ಯಂತ ಆಕ್ಷೇಪಾರ್ಹವೆಂದು ಪರಿಗಣಿಸಲಾದ ಇತ್ತೀಚಿನ ಹೇಳಿಕೆಗಳನ್ನು ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿತ್ತು.

ತನ್ನ ಇತ್ತೀಚಿನ ಭಾಷಣದಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.42ರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಪ್ರಚೋದನಾತ್ಮಕ ಪದಗಳನ್ನು ಬಳಸಿ ಕವಿತಾರನ್ನು ಟೀಕಿಸಿದ್ದರು. ಇದು ಜಾಗ್ರತಿ ಕಾರ್ಯಕರ್ತರನ್ನು ಕೆರಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News