ದೇಶದ ಪ್ರಗತಿ ಬಗ್ಗೆ ಯೋಚಿಸಿದ ವ್ಯಕ್ತಿಗೆ ಮೋದಿ ಸರಕಾರದಿಂದ ಕಿರುಕುಳ : ವಾಂಗ್ಚುಕ್ ಬಂಧನದ ಬಗ್ಗೆ ಕೇಜ್ರಿವಾಲ್ ಪ್ರತಿಕ್ರಿಯೆ
Update: 2025-09-26 20:27 IST
ಸೋನಂ ವಾಂಗ್ಚುಕ್ , ಅರವಿಂದ ಕೇಜ್ರಿವಾಲ್ | PTI
ಹೊಸದಿಲ್ಲಿ,ಸೆ.25: ಲಡಾಖ್‌ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಬಂಧನವನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಖಂಡಿಸಿದ್ದಾರೆ. ದೇಶದ ಅಭಿವೃದ್ಧಿಯ ಕುರಿತು ಯೋಚಿಸುತ್ತಿರುವ ವ್ಯಕ್ತಿಗೆ ಕಿರುಕುಳ ನೀಡಲು ಕೇಂದ್ರ ಸರಕಾರವು ತನ್ನ ಇಡೀ ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.
‘‘ಸೋನಂ ವಾಂಗ್ಚುಕ್ ಕುರಿತು ಓದಿ. ಆತ ದೇಶದ ಅಭಿವೃದ್ಧಿ, ಶಿಕ್ಷಣದ ಬಗ್ಗೆ ಯೋಚಿಸುವ ಮತ್ತು ಹೊಸ ಅನ್ವೇಷಣೆಗಳನ್ನು ನಡೆಸುವ ವ್ಯಕ್ತಿ. ಕೇವಲ ಅಗ್ಗದ ರಾಜಕಾರಣಕ್ಕಾಗಿ ಅವರಿಗೆ ಕೇಂದ್ರ ಸರಕಾರದ ಇಡೀ ಆಡಳಿತ ಯಂತ್ರವು ಕಿರುಕುಳ ನೀಡುತ್ತಿದೆ ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋನಂ ವಾಂಗ್ಚುಕ್ ಬಂಧವನ್ನು ತೀವ್ರವಾಗಿ ಖಂಡಿಸಿರುವ ಕೇಜ್ರಿವಾಲ್, ‘‘ದೇಶವು ಇಂತಹ ವ್ಯಕ್ತಿಗಳ ಕೈಯಲ್ಲಿದ್ದರೆ ಆಡಳಿತ ಹೇಗೆ ತಾನೇ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.