×
Ad

ಮುಖ್ತಾರ್ ಅನ್ಸಾರಿ ಅಂತ್ಯ ಸಂಸ್ಕಾರ: ಭಾರೀ ಸಂಖ್ಯೆಯಲ್ಲಿ ನೆರೆದ ಜನಸ್ತೋಮ

Update: 2024-03-30 12:51 IST

Photo: PTI 

ಘಾಝಿಪುರ (ಉತ್ತರ ಪ್ರದೇಶ): ಗ್ಯಾಂಗ್ ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಯ ಅಂತ್ಯ ಸಂಸ್ಕಾರವು ಇಂದು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಉತ್ತರ ಪ್ರದೇಶದ ಘಾಝಿಪುರದಲ್ಲಿ ನೆರವೇರಿತು. ಬಂಡ ಜಿಲ್ಲೆಯ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಲ್ಲಿ ಅವರ ಮರಣೋತ್ತರ ಪರೀಕ್ಷೆ ಮುಗಿದ ನಂತರ, 400 ಕಿಮೀ ಮಾರ್ಗದ ಮೂಲಕ ಅವರ ಮೃತದೇಹವನ್ನು ಅವರ ತವರಾದ ಘಾಝಿಪುರಕ್ಕೆ ತರಲಾಯಿತು.

ಅನ್ಸಾರಿ ಅವರ ತವರಾದ ಘಾಝಿಪುರಕ್ಕೆ ಪ್ರಯಾಗ್ ರಾಜ್, ಭದೋಹಿ, ಕೌಶಾಂಬಿ ಹಾಗೂ ವಾರಾಣಸಿಯ ಮೂಲಕ ಆ್ಯಂಬುಲೆನ್ಸ್ ನಲ್ಲಿ ಕರೆ ತರಲಾಯಿತು. ಈ ಆ್ಯಂಬುಲೆನ್ಸ್ ಅನ್ನು 24 ಪೊಲೀಸ್ ವಾಹನಗಳು ಸೇರಿದಂತೆ ಒಟ್ಟು 26 ಬೆಂಗಾವಲು ವಾಹನಗಳು ಹಿಂಬಾಲಿಸಿಕೊಂಡು ಬಂದವು.

ಈ ಪ್ರಯಾಣದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಲ್ಲಿ ಅನ್ಸಾರಿಯ ಪುತ್ರರಾದ ಉಮರ್ ಅನ್ಸಾರಿ ಹಾಗೂ ಅಬ್ಬಾಸ್ ಅನ್ಸಾರಿ, ಮೃತ ಅಬ್ಬಾಸ್ ರ ಪತ್ನಿ, ಇಬ್ಬರು ಸೋದರ ಸಂಬಂಧಿಗಳು ಪ್ರಯಾಣಿಸಿದರು.

ಅನ್ಸಾರಿ ಅವರ ಅಂತ್ಯ ಸಂಸ್ಕಾರವನ್ನು ಮುಹಮ್ಮದಾಬಾದ್ ನ ಕಾಲಿ ಬಾಗ್ ನಲ್ಲಿರುವ ಸ್ಮಶಾನದಲ್ಲಿ ನೆರವೇರಿಸಲಾಯಿತು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಘಾಝಿಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News