×
Ad

ಮುಸ್ಲಿಂ ವ್ಯಕ್ತಿ 2ನೇ ವಿವಾಹ ನೋಂದಣಿ ಮಾಡಲು ಮೊದಲ ಪತ್ನಿಗೆ ಮಾಹಿತಿ ಕಡ್ಡಾಯ: ಕೇರಳ ಹೈಕೋರ್ಟ್

Update: 2025-11-05 16:38 IST

ಸಾಂದರ್ಭಿಕ ಚಿತ್ರ

ಕೊಚ್ಚಿನ್: ಮುಸ್ಲಿಂ ವ್ಯಕ್ತಿ ತನ್ನ ಮೊದಲ ಪತ್ನಿಗೆ ಮಾಹಿತಿ ನೀಡದೇ ಎರಡನೇ ವಿವಾಹವನ್ನು ನೋಂದಣಿ ಮಾಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಕೇರಳ ರಿಜಿಸ್ಟ್ರೇಷನ್ ಆಫ್ ಮ್ಯಾರೇಜಸ್ (ಕಾಮನ್) ರೂಲ್ಸ್-2008ರ ಅಡಿಯಲ್ಲಿ, ಮೊದಲ ಪತ್ನಿ ಜತೆಗಿನ ವೈವಾಹಿಕ ಸಂಬಂಧ ಅಧಿಕೃತವಾಗಿ ಇರುವವರೆಗೂ ಎರಡನೇ ವಿವಾಹವನ್ನು ನೋಂದಣಿ ಮಾಡಬೇಕಿದ್ದರೆ ಮೊದಲ ಪತ್ನಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.

ಕಣ್ಣೂರಿನ 40 ವರ್ಷದ ವ್ಯಕ್ತಿ ಹಾಗೂ ಆತನ ಎರಡನೇ ಪತ್ನಿ ಕಾಸರಗೋಡಿನ ಮಹಿಳೆ (38) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಈ ತೀರ್ಪು ನೀಡಿದ್ದಾರೆ. ಮೊದಲ ಪತ್ನಿಗೆ ಮಾಹಿತಿ ನೀಡಿಲ್ಲ ಎಂಬ ಕಾರಣದಿಂದ ಎರಡನೇ ವಿವಾಹವನ್ನು ನೋಂದಣಿ ಮಾಡಲು ನಿರಾಕರಿಸಿದ ಸ್ಥಳೀಯ ಸಂಸ್ಥೆಯ ರಿಜಿಸ್ಟ್ರಾರ್ ಅವರ ನಿರ್ಧಾರವನ್ನು ಪ್ರಶ್ನಿಸಿ ಈ ಜೋಡಿ ಅರ್ಜಿ ಸಲ್ಲಿಸಿತ್ತು. 

ಎರಡನೇ ವಿವಾಹ ಅಮಾನ್ಯ ಎಂದು ಮೊದಲ ಪತ್ನಿ ಆಕ್ಷೇಪಿಸಿದಲ್ಲಿ, ರಿಜಿಸ್ಟ್ರಾರ್ ಎರಡನೇ ವಿವಾಹವನ್ನು ನೋಂದಣಿ ಮಾಡಿಕೊಳ್ಳುವಂತಿಲ್ಲ. ಇಂಥ ಸಂದರ್ಭದಲ್ಲಿ ಉಭಯ ಕಡೆಯವರ ಸಿವಿಲ್ ಕೋರ್ಟ್ ನಲ್ಲಿ ಈ ವಿವಾಹ ಅಧಿಕೃತ ಎಂದು ದೃಢಪಡಿಸಬೇಕಾಗುತ್ತದೆ ಎಂದು ಅ.30ರಂದು ನೀಡಿದ ತೀರ್ಪಿನಲ್ಲಿ ಹೇಳಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ, ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ಪುರುಷರು ಎರಡನೇ ವಿವಾಹವಾಗಲು ಅವಕಾಶವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News