×
Ad

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ವಿರುದ್ಧ ಹೊಸ ಎಫ್ಐಆರ್

Update: 2025-11-30 07:50 IST

PC: x.com/News9Tweets

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಆರು ಸಹಚರರು & ಸಂಸ್ಥೆಗಳ ವಿರುದ್ಧ ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗ ಹೊಸ ಎಫ್ಐಆರ್ ದಾಖಲಿಸಿದೆ.

ಕಾಂಗ್ರಸ್ ಪಕ್ಷ ಹೊಂದಿದ್ದ 2000 ರೂಪಾಯಿ ಆಸ್ತಿ ಮೌಲ್ಯದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆಯನ್ನು ಅಕ್ರಮವಾಗಿ ಖರೀದಿಸಲು ಅಪರಾಧ ಪಿತೂರಿ ನಡೆಸಿದ ಆರೋಪ ಇದಾಗಿದೆ. ಯಂಗ್ ಇಂಡಿಯನ್ ಮೂಲಕ ಈ ಖರೀದಿ ನಡೆದಿದ್ದು, ಇದರಲ್ಲಿ ತಾಯಿ-ಮಗ ಶೇಕಡ 76ರಷ್ಟು ಷೇರುಗಳನ್ನು ಹೊಂದಿದ್ದರು.

2008-2024ರವರೆಗಿನ ನ್ಯಾಷನಲ್ ಹೆರಾಲ್ಡ್ ಹಣ ದುರುಪಯೋಗ ಪ್ರಕರಣದ ತನಿಖೆ ನಡೆಸಿದ ಕಾನೂನು ಜಾರಿ ನಿರ್ದೇಶನಾಲಯದ ಹೆಡ್ಕಾಟ್ರ್ರಸ್ ಇನ್ವೆಸ್ಟಿಗೇಟಿವ್ ಯುನಿಟ್ (ಎಚ್ಐಯು) ನೀಡಿದ ದೂರಿನ ಮೇರೆಗೆ ಅಕ್ಟೋಬರ್ 3ರಂದು ಈ ಎಫ್ಐಆರ್ ದಾಖಲಾಗಿದೆ.

ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 66(2)ರ ಅನ್ವಯ ಕಾನೂನು ಜಾರಿ ನಿರ್ದೇಶನಾಲಯವು ನಿಗದಿತ ಅಪರಾಧಗಳ ಬಗ್ಗೆ ಪ್ರಕರಣ ನೋಂದಾಯಿಸಿಕೊಳ್ಳಲು ಹಾಗೂ ತನಿಖೆ ನಡೆಸಲು ಇತರ ಕಾನೂನು ಜಾರಿ ಸಂಸ್ಥೆಗಳ ಬಳಿ ತನಿಖೆಯ ವಿವರಗಳನ್ನು ಹಂಚಿಕೊಳ್ಳಲು ಅವಕಾಶವಿದೆ.

ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ನೀಡಿದ ಖಾಸಗಿ ದೂರಿನ ಬಗ್ಗೆ ಮತ್ತು ಪಾಟಿಯಾಲಾ ಹೌಸ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2014ರಲ್ಲಿ ನೀಡಿದ ಸೂಚನೆ ಮೇರೆಗೆ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ಏಪ್ರಿಲ್ 9ರಂದು ಪಿಎಂಎಲ್ಎ ಕಾಯ್ದೆಯಡಿ ರೋಸ್ ಅವೆನ್ಯೂ ಎಂಪಿ/ಎಂಎಲ್ಎ ಕೋರ್ಟ್ನಲ್ಲಿ ಸೋನಿಯಾ-ರಾಹುಲ್ ವಿರುದ್ಧ ಏಪ್ರಿಲ್ 9ರಂದು ಆರೋಪಪಟ್ಟಿ ಸಲ್ಲಿಸಿತ್ತು. ಆದರೆ ಇದನ್ನು ನ್ಯಾಯಾಲಯ ಇನ್ನೂ ಪರಿಗಣಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News