×
Ad

NDA ಸರಕಾರ ಯಾವ ಕ್ಷಣದಲ್ಲಾದರೂ ಪತನವಾಗಬಹುದು: ಮಲ್ಲಿಕಾರ್ಜುನ ಖರ್ಗೆ

Update: 2024-06-15 13:27 IST

ಮಲ್ಲಿಕಾರ್ಜುನ ಖರ್ಗೆ | PTI 

ಹೊಸದಿಲ್ಲಿ: NDA ಸರಕಾರ ಅಲ್ಪಮತದ ಸರಕಾರವಾಗಿದ್ದು, ಅದು ಆಕಸ್ಮಿಕವಾಗಿ ರಚನೆಯಾಗಿದೆ. ಪ್ರಧಾನಿ ಮೋದಿ ಪರವಾಗಿ ಜನತೆ ತೀರ್ಪು ನೀಡಿಲ್ಲ. ಹೀಗಾಗಿ ಈ ಸರಕಾರವು ಯಾವ ಕ್ಷಣದಲ್ಲಿ ಬೇಕಾದರೂ ಪತನವಾಗಬಹುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

“NDA ಸರಕಾರ ಆಕಸ್ಮಿಕವಾಗಿ ರಚನೆಯಾಗಿದೆ. ಮೋದಿಯ ಪರವಾಗಿ ಜನತೆ ತೀರ್ಪು ನೀಡಿಲ್ಲ. ಇದು ಅಲ್ಪಮತದ ಸರಕಾರವಾಗಿದ್ದು, ಯಾವ ಕ್ಷಣದಲ್ಲಾದರೂ ಪತನವಾಗುವ ಸಾಧ್ಯಗತೆ ಇದೆ. ನಾವು ಈ ಸರಕಾರ ಮುಂದುವರಿಯಬೇಕು ಎಂದು ಬಯಸುತ್ತೇವೆ. ಈ ಸರಕಾರದಿಂದ ದೇಶಕ್ಕೆ ಒಳಿತಾಗಲಿ. ದೇಶವನ್ನು ಬಲಿಷ್ಠಗೊಳಿಸಲು ನಾವೆಲ್ಲ ಒಟ್ಟಿಗೆ ಕೆಲಸ ಮಾಡಬೇಕಿದೆ. ಆದರೆ, ಒಳ್ಳೆಯದು ಮುಂದುವರಿಯುವುದಕ್ಕೆ ಅವಕಾಶ ನೀಡದಿರುವ ಅಭ್ಯಾಸ ಪ್ರಧಾನಿಗಿದೆ. ಆದರೆ, ನಾವು ದೇಶವನ್ನು ಬಲಿಷ್ಠಗೊಳಿಸಲು ಸಹಕಾರ ನೀಡಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಯು ವಿಧಾನ ಪರಿಷತ್ ಸದಸ್ಯ ನೀರಜ್ ಕುಮಾರ್, ಪಿ.ವಿ.ನರಸಿಂಹ ರಾವ್ ಹಾಗೂ ಮನಮೋಹನ್ ಸಿಂಗ್ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರಗಳ ಸಾಧನೆ ಹೇಗಿತ್ತು ಎಂಬುದನ್ನು ನೆನಪಿಸಿದ್ದಾರೆ. 1991ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 244 ಸ್ಥಾನಗಳನ್ನು ಗಳಿಸಿದರೆ, 2004ರ ಚುನಾವಣೆಯಲ್ಲಿ 114 ಸ್ಥಾನಗಳನ್ನು ಗಳಿಸಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News