×
Ad

ಗಾಝಾ ಆಸ್ಪತ್ರೆಯ ಮೇಲಿನ ದಾಳಿಗೆ ಪ್ರಧಾನಿ ಮೋದಿ ಖಂಡನೆ

Update: 2023-10-18 16:48 IST

Photo : PTI

ಹೊಸದಿಲ್ಲಿ : ಫೆಲಸ್ತೀನಿನ ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಮೇಲಿನ ವೈಮಾನಿಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ. 

ಈ ಕುರಿತು x ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, “ಗಾಝಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ದುರಂತದ ಬಗ್ಗೆ ತೀವ್ರ ಆಘಾತವಾಯಿತು. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂಬ ಪ್ರಾರ್ಥನೆ ನಮ್ಮದು".

"ಈಗ ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕ ಸಾವು ನೋವುಗಳ ಬಗ್ಗೆ ಗಂಭೀರ, ನಿರಂತರ ಕಾಳಜಿಯ ವಿಷಯ. ಈ ಘಟನೆಗೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿಸಬೇಕು”

ಎಂದು ತಿಳಿಸಿದ್ದಾರೆ.

ಮೋದಿ ಈ ಪೋಸ್ಟ್‌ ನಲ್ಲಿ ಎಲ್ಲೂ ಸಾವಿನ ಸಂಖ್ಯೆ, ಇಸ್ರೇಲ್‌ ಹೆಸರು ನಮೂದಿಸಿಲ್ಲ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News