×
Ad

ಆ. 31ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ

7 ವರ್ಷಗಳ ನಂತರ ಪ್ರಧಾನಿ ಮೋದಿ ಚೀನಾ ಭೇಟಿ

Update: 2025-08-28 15:01 IST

File Photo: PTI

ಹೊಸದಿಲ್ಲಿ: ಆಗಸ್ಟ್ 31ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ತಿಯಾಂಜಿನ್ ನಲ್ಲಿ ಭೇಟಿಯಾಗಲಿದ್ದಾರೆ. 2025ರ ಶಾಂಘೈ ಕೋ ಆಪರೇಷನ್ ಆರ್ಗನೈಸೇಷನ್ ಶೃಂಗಸಭೆಯ ನೇಪಥ್ಯದಲ್ಲಿ ಈ ಭೇಟಿ ನಡೆಯಲಿದೆ. ಭಾರತ ಮತ್ತು ಚೀನಾ ನಡುವೆ ಸುಸ್ಥಿರ ಸಂಬಂಧ ಏರ್ಪಡಿಸುವ ಹಾಗೂ ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸುಂಕ ಹೆಚ್ಚಳ ಸಮರದ ಹಿನ್ನೆಲೆಯಲ್ಲಿ ಈ ಭೇಟಿಯು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಗಮನ ಸೆಳೆದಿದೆ.

ಭಾರತ ಹಾಗೂ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧವು ಹದಗೆಟ್ಟಿರುವ ಹೊತ್ತಿನಲ್ಲಿ ಈ ಭೇಟಿ ನಡೆಯುತ್ತಿದ್ದು, ಉಕ್ಕು, ಜವಳಿ ಹಾಗೂ ಹೈನೋತ್ಪನ್ನದಂತಹ ಭಾರತೀಯ ಉತ್ಪನ್ನಗಳ ಮೇಲೆ ಇತ್ತೀಚೆಗೆ ಅಮೆರಿಕ ಶೇ. 50ರವರೆಗೆ ಭಾರಿ ಪ್ರಮಾಣದ ಸುಂಕ ಏರಿಕೆ ಮಾಡಿದೆ. ಈ ಕುರಿತು ವಿಶ್ವ ವಾಣಿಜ್ಯ ಸಂಸ್ಥೆಯೊಂದಿಗೆ ಮಾತುಕತೆ ನಡೆಸುವ ಸೂಚನೆಯನ್ನು ಭಾರತ ನೀಡಿದ್ದರೂ, ಭಾರತೀಯ ರಫ್ತುದಾರರಿಗೆ ಸಮಾಧಾನ ತಂದಿಲ್ಲ. ಹೀಗಾಗಿ, ಭಾರತದ ಬಹು ಮುಖ್ಯ ವ್ಯಾಪಾರಿ ಪಾಲುದಾರನಾದ ಅಮೆರಿಕದೊಂದಿಗಿನ ಸಂಬಂಧದ ಮೇಲೆ ಕರಿನೆರಳು ಚಾಚಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಭಾರತ ಮತ್ತು ಚೀನಾದೊಂದಿಗಿನ ಸಂಬಂಧ ಚಂಚಲವಾಗಿದ್ದರೂ, ಹಲವಾರು ವರ್ಷಗಳ ನಂತರ, ಭಾರತದೊಂದಿಗಿನ ಸಂಬಂಧವನ್ನು ಎಚ್ಚರಿಕೆಯಿಂದ ಸುಧಾರಿಸುವ ಸಂಕೇತವನ್ನು ಚೀನಾ ನೀಡಿದೆ. 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾರಕ ಸಂಘರ್ಷದ ನಂತರ, ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News