"ಚುನಾವಣಾ ಅಧಿಕಾರಿಗಳು ತಮ್ಮ ತಪ್ಪಿಗೆ ನನ್ನನ್ನು ದೂಷಿಸುತ್ತಿದ್ದಾರೆ" : 2 ಗುರುತಿನ ಚೀಟಿ ಕುರಿತ ನೋಟಿಸ್‌ಗೆ ತೇಜಸ್ವಿ ಯಾದವ್ ಪ್ರತಿಕ್ರಿಯೆ
ತೇಜಸ್ವಿ ಯಾದವ್ | PTI
ಪಾಟ್ನಾ: ನನಗೆ ಎರಡು ಮತದಾರರ ಗುರುತಿನ ಚೀಟಿಗಳನ್ನು ನೀಡಿರುವುದು ಚುನಾವಣಾ ಅಧಿಕಾರಿಗಳ ತಪ್ಪು. ಆದರೆ, ಅವರು ತಮ್ಮ ತಪ್ಪನ್ನು ಮರೆಮಾಡಲು ನನಗೆ ನೋಟಿಸ್ ಕಳುಹಿಸಿ ತಮ್ಮ ತಪ್ಪಿಗೆ ನನ್ನನ್ನು ದೂಷಿಸುತ್ತಿದ್ದಾರೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಪಾಟ್ನಾ ಜಿಲ್ಲಾಡಳಿತದಿಂದ ನನಗೆ ನೋಟಿಸ್ ಬಂದಿದೆ. ಚುನಾವಣಾ ಆಯೋಗದಿಂದಲ್ಲ. ನಾನು ನೋಟಿಸ್‌ಗೆ ತಕ್ಕ ಉತ್ತರವನ್ನು ನೀಡುತ್ತೇನೆ. ಅವರು ತಮ್ಮ ತಪ್ಪಿಗೆ ನನ್ನನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಹೆಸರಿನಲ್ಲಿ ಎರಡು ಗುರುತಿನ ಚೀಟಿಗಳನ್ನು ನೀಡಿದ್ದರೆ ಅದು ಯಾರ ತಪ್ಪು? ನಾನು ಒಂದೇ ಸ್ಥಳದಿಂದ ಮತ ಚಲಾಯಿಸುತ್ತಿದ್ದೇನೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಆಗಸ್ಟ್ 1ರಂದು ಬಿಡುಗಡೆಯಾಗಿರುವ ಬಿಹಾರದ ಕರಡು ಮತಪಟ್ಟಿಯಿಂದ ನನ್ನ ಹೆಸರು ನಾಪತ್ತೆಯಾಗಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದರು.
ಆಗಸ್ಟ್ 3ರಂದು ಎರಡು ಗುರುತಿನ ಚೀಟಿಯನ್ನು ಹೊಂದಿದ್ದಾರೆ ಎಂದು ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು.