ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ
ಪ್ರಧಾನಿ ಮೋದಿ , ರಾಷ್ಟ್ರಪತಿ ಮುರ್ಮು | PTI
ಹೊಸದಿಲ್ಲಿ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿರುವ ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಶುಭಾಶಯ ಕೋರಿದ್ದಾರೆ.
“ದೀಪಾವಳಿಯ ಶುಭ ಸಂದರ್ಭದಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಎಲ್ಲ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ನಮ್ಮೆಲ್ಲರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಿಸಲಿ. ನಮ್ಮ ಸುತ್ತಲೂ ಸಕಾರಾತ್ಮಕ ಮನೋಭಾವ ನೆಲೆಸಲಿ” ಎಂದು ಶುಭ ಹಾರೈಸಿದ್ದಾರೆ.
ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದು, “ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಬದುಕಿನ ಸಂಕಷ್ಟಗಳನ್ನು ನೀಗಿಸಿ, ಪ್ರಗತಿಯ ಬೆಳಕು ಜೀವನದಲ್ಲಿ ಪಸರಿಸಿಲಿ. ದೀಪಗಳ ಹಬ್ಬವು ತಮ್ಮೆಲ್ಲರ ಜೀವನದಲ್ಲಿ ಯಶಸ್ಸು, ಸಮೃದ್ಧಿ, ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶುಭಾಶಯ ಕೋರಿದ್ದಾರೆ.