×
Ad

ಅತ್ಯಾಚಾರ ಪ್ರಕರಣ | ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು ಮಂಜೂರು

Update: 2025-06-23 17:44 IST

ಅಸಾರಾಂ (Photo credit: ANI)

ಜೋಧ್ ಪುರ: ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೋಧ್ಪುರ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

2013ರಲ್ಲಿ ಜೋಧ್‌ ಪುರ ಆಶ್ರಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅಸಾರಾಂ ಹೃದಯ ಸಂಬಂಧಿ ಕಾಯಿಲೆಯ ಜೊತೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ನ್ಯಾಯ ಪೀಠ ಜಾಮೀನು ನೀಡುವ ವೇಳೆ ಹೇಳಿದೆ. ಮಧ್ಯಂತರ ಜಾಮೀನಿನಿಂದ ಜೈಲಿನಿಂದ ಬಿಡುಗಡೆಯಾದ ನಂತರ ಯಾವುದೇ ಕಾರಣಕ್ಕೂ ಅನುಯಾಯಿಗಳನ್ನು ಭೇಟಿ ಮಾಡದಂತೆ ಅವರಿಗೆ ನಿರ್ದೇಶನ ನೀಡಿದೆ.

2013ರಲ್ಲಿ ಜೋಧಪುರದ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಸಾರಾಂ ಬಾಪು ಅಪರಾಧಿ ಎಂದು ಸಾಬೀತಾಗಿತ್ತು. 86 ವರ್ಷದ ಅಸಾರಾಂ ಬಾಪುಗೆ ಜೋಧಪುರ ವಿಚಾರಣಾ ನ್ಯಾಯಾಲಯವು ಐಪಿಸಿ ಸೆಕ್ಷನ್ 376, ಪೋಕ್ಸೋ ಕಾಯ್ದೆ ಮತ್ತು ಬಾಲಾರೋಪ ನ್ಯಾಯ ಕಾಯ್ದೆ ಅಡಿ ಶಿಕ್ಷೆ ವಿಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News