×
Ad

ಸಿಎಸ್‌ಕೆ ಸೇರ್ಪಡೆಗೊಳ್ಳಲು ದಿನೇಶ್ ಕಾರ್ತಿಕ್ ಗೆ ಋತುರಾಜ್ ಗಾಯಕ್ವಾಡ್ ಆಹ್ವಾನ

Update: 2024-05-17 21:56 IST

 ಋತುರಾಜ್ ಗಾಯಕ್ವಾಡ್ , ದಿನೇಶ್ ಕಾರ್ತಿಕ್ : PC : X 

ಹೊಸದಿಲ್ಲಿ: ಎಂ.ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಶನಿವಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹವಾಮಾನ ಪರಿಸ್ಥಿತಿ ತನ್ನ ಪರವಾಗಿರಲಿದೆ ಎಂಬ ವಿಶ್ವಾಸದಲ್ಲಿದೆ. ಐಪಿಎಲ್ ಪ್ಲೇ ಆಫ್ ಗೆ ನಾಲ್ಕನೇ ಹಾಗೂ ಅಂತಿಮ ತಂಡದ ಅರ್ಹತೆಯನ್ನು ನಿರ್ಣಯಿಸಲು ಈ ಪಂದ್ಯ ಮಾಡು ಇಲ್ಲವೇ ಮಡಿ ಎನಿಸಿಕೊಂಡಿದೆ.

ಈ ಮಹತ್ವದ ಪಂದ್ಯಕ್ಕೆ ಮೊದಲು ದಿನೇಶ್ ಕಾರ್ತಿಕ್ ಅವರು ಸಿಎಸ್‌ಕೆ  ನಾಯಕ ಋತುರಾಜ್ ಗಾಯಕ್ವಾಡ್ ರ ಸಂದೇಶವನ್ನು ಹೊಂದಿರುವ ಇನ್ಸ್ಟಾಗ್ರಾಮ್ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಮುಂದಿನ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳುವಂತೆ 38ರ ಹರೆಯದ ಅನುಭವಿ ಆಟಗಾರ ಕಾರ್ತಿಕ್ ಗೆ  ಋತುರಾಜ್ ಆಹ್ವಾನ ನೀಡಿದ್ದಾರೆ.

ನಾಯಕರೇ, ದಯವಿಟ್ಟು ನನ್ನ ಪಾತ್ರದ ಬಗ್ಗೆ ವಿವರಣೆ ನೀಡಿ ಎಂದು ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ.

ಡೆತ್ ಓವರ್ ನಲ್ಲಿ ಬಿರುಸಿನ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ಕಾರ್ತಿಕ್ ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

2024ರ ಐಪಿಎಲ್ ನಲ್ಲಿ 13 ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ, 194.19ರ ಸ್ಟ್ರೈಕ್ರೇಟ್ ನಲ್ಲಿ 310 ರನ್ ಗಳಿಸಿದ್ದಾರೆ.

ಒಟ್ಟು 14 ಅಂಕ ಗಳಿಸಿ, 0.528 ನೆಟ್ರನ್ರೇಟ್ ಹೊಂದಿರುವ ಸಿಎಸ್ಕೆ ತನ್ನ ನೆಚ್ಚಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಆರ್ಸಿಬಿ ವಿರುದ್ಧ ಆಡಿರುವ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಸೋತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News