×
Ad

ಗುಜರಾತ್ : ಲೈಂಗಿಕ ಕಿರುಕುಳವನ್ನು ಪ್ರತಿರೋಧಿಸಿದ್ದಕ್ಕೆ ಆರು ವರ್ಷದ ಬಾಲಕಿಯನ್ನು ಹತ್ಯೆಗೈದ ಶಾಲಾ ಪ್ರಾಂಶುಪಾಲ

Update: 2024-09-23 15:36 IST

Photo: indianexpress.com

ದಾಹೋಡ್ (ಗುಜರಾತ್): ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಪ್ರಯತ್ನವನ್ನು ಪ್ರತಿರೋಧಿಸಿದ ಬಾಲಕಿಯನ್ನು ಸರಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಹತ್ಯೆಗೈದಿರುವ ಘಟನೆ ಗುಜರಾತ್‌ನ ದಾಹೋಡ್ ಜಿಲ್ಲೆಯಲ್ಲಿ ನಡೆಸಿದ್ದು, ಈ ಸಂಬಂಧ ಆರೋಪಿ ಪ್ರಾಂಶುಪಾಲರನ್ನು ಬಂಧಿಸಲಾಗಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಮೃತದೇಹವು ಸಿಂಗ್ವಾಡ ತಾಲ್ಲೂಕಿನಲ್ಲಿರುವ ಶಾಲೆಯ ಆವರಣದೊಳಗೆ ಗುರುವಾರ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಪ್ರಯತ್ನವನ್ನು ಬಾಲಕಿಯು ಪ್ರತಿರೋಧಿಸಿದ್ದರಿಂದ ಪ್ರಾಂಶುಪಾಲ ಗೋವಿಂದ್ ನಾಥ್ ಆಕೆಯ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್ ಸಿಂಗ್ ಝಲ ತಿಳಿಸಿದ್ದಾರೆ.

ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಪ್ರಾಂಶುಪಾಲ ಗೋವಿಂದ್ ನಾಥ್ ಸಂಜೆ ಶಾಲೆ ತೊರೆದ ಸಮಯವು ಆತನನ್ನು ಪ್ರಮುಖ ಶಂಕಿತ ಆರೋಪಿಯನ್ನಾಗಿಸಿತ್ತು. ವಿಚಾರಣೆಗೊಳಪಡಿಸಿದಾಗ, ಆರೋಪಿ ಗೋವಿಂದ್ ನಾಥ್, ತಾನು ಅಪರಾಧವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News