×
Ad

ಮಣಿಪುರ: ಹಫ್ತಾ ವಸೂಲಿಯಲ್ಲಿ ತೊಡಗಿದ್ದ ನಿಷೇಧಿತ ಸಂಘಟನೆಗಳ ಆರು ಸದಸ್ಯರ ಸೆರೆ

Update: 2025-02-13 20:27 IST

Photo Credit: X/@manipur_police

ಇಂಫಾಲ: ಮಣಿಪುರದ ಇಂಫಾಲ ಪಶ್ಚಿಮ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ಹಫ್ತಾ ವಸೂಲಿಯಲ್ಲಿ ತೊಡಗಿದ್ದ ಮೂರು ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಜನರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಗುರುವಾರ ತಿಳಿಸಿದರು.

ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿಯ ನಾಲ್ವರು ಕಾರ್ಯಕರ್ತರನ್ನು ಬುಧವಾರ ಇಂಫಾಲ್ ಪೂರ್ವ ಜಿಲ್ಲೆಯ ಕಮೆಂಗ್ ಸಬಲ್ನಲ್ಲಿಯ ಅವರ ಶಿಬಿರದಿಂದ ಬಂಧಿಸಲಾಗಿದೆ. ಆರೋಪಿಗಳು ಇಂಫಾಲ್ ಸುತ್ತುಮುತ್ತಲ ಪ್ರದೇಶಗಳಲ್ಲಿಯ ಜನರು, ಅಂಗಡಿಗಳು, ಕೃಷರ್ಗಳು, ಸರಕಾರಿ ಉದ್ಯೋಗಿಗಳು ಮತ್ತು ಫಾರ್ಮಸಿಗಳಿಂದ ಹಫ್ತಾ ವಸೂಲು ಮಾಡುತ್ತಿದ್ದರು. ಅವರ ಬಳಿಯಿಂದ ಐದು ಬಂದೂಕುಗಳು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.

ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗಜಾಮೀ ಓಕ್ರಂ ಲೀಕೈನಲ್ಲಿ ನಿಷೇಧಿತ ಪ್ರಿಪಾಕ್ ಸಂಘಟನೆಯ ಓರ್ವ ಸದಸ್ಯನನ್ನು ಮತ್ತು ಕಾಕ್ಚಿಂಗ್ ಜಿಲ್ಲೆಯ ಎರುಮ್ಪಾಲ್ ಪ್ರದೇಶದಲ್ಲಿ ನಿಷೇಧಿತ ಕೆಸಿಪಿ(ಸಿಟಿ ಮೈತೈ)ಯ ಸದಸ್ಯನೋರ್ವನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News