×
Ad

ತಮಿಳು ನಟ ದಳಪತಿ ವಿಜಯ್ ಲೋಕಸಭಾ ಚುನಾವಣೆಗೆ ರಾಜಕೀಯ ಪಾದಾರ್ಪಣೆಗೆ ಸಜ್ಜು

Update: 2024-01-26 18:21 IST

ತಮಿಳು ನಟ ವಿಜಯ್ | Photo: X \ @actorvijay

ಚೆನ್ನೈ : ತಮಿಳು ನಟ ವಿಜಯ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಾದಾರ್ಪಣೆಗೆ ಸಜ್ಜಾಗಿದ್ದಾರೆ ಎಂದು indiatoday.in ವರದಿ ಮಾಡಿದೆ. ಈ ಕುರಿತು ಜನವರಿ 25ರಂದು ದಳಪತಿ ವಿಜಯ್ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವಿಜಯ್ ಅವರು ತಮ್ಮ ನೂತನ ಪಕ್ಷಕ್ಕೆ ಮಕ್ಕಳ್ ಇಯಕ್ಕಂ ಎಂದು ಹೆಸರು ನೋಂದಾಯಿಸಲಿದ್ದಾರೆ ಎನ್ನಲಾಗಿದೆ.

ಪಕ್ಷದ ನೋಂದಣಿ ಕಾರ್ಯವೂ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಈ ಕುರಿತು ಗುರುವಾರ ಚೆನ್ನೈನಲ್ಲಿ ಸಭೆ ನಡೆದಿದ್ದು, ದಳಪತಿ ವಿಜಯ್ ಅವರಿಗೆ ಪಕ್ಷವನ್ನು ನೋಂದಾಯಿಸಲು ಬಿಡ್ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. 2018 ರಲ್ಲಿ ನಡೆದ ತೂತ್ತುಕುಡಿಯಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರನ್ನು ವಿಜಯ್ ಭೇಟಿ ಮಾಡಿದ್ದರು.

ಅಂದಿನಿಂದ, ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ತಮ್ಮ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ, ರಾಜಕೀಯ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅಭಿಮಾನಿ ಸಂಘವು ತಮಿಳುನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸ್ಪರ್ಧಿಸಿತ್ತು. ಈ ಹಿಂದೆ ವಿಜಯ್, ಡಿಸೆಂಬರ್ ನಲ್ಲಿ ಪ್ರವಾಹದಿಂದ ಜರ್ಜರಿತವಾಗಿರುವ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಗೆ ಭೇಟಿ ನೀಡಿ, ಬರಪೀಡಿತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿ ಮಾನವೀಯತೆ ಮೆರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News