ತಮ್ಮ ಬಾಯಿಗಳಲ್ಲಿ ಇಲಿಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದ ತಮಿಳುನಾಡು ರೈತರು
Update: 2023-09-26 22:03 IST
Photo: ANI
ತಿರುಚ್ಚಿ: ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗಾಗಿ ಆಗ್ರಹಿಸಿ ಇಲ್ಲಿಯ ರೈತರು ಮಂಗಳವಾರ ತಮ್ಮ ಬಾಯಿಗಳಲ್ಲಿ ಇಲಿಗಳನ್ನು ಇಟ್ಟುಕೊಂಡು ಕರ್ನಾಟಕ ಮತ್ತು ಕೇಂದ್ರ ಸರಕಾರಗಳ ವಿರುದ್ಧ ವಿಲಕ್ಷಣ ಪ್ರತಿಭಟನೆಯನ್ನು ನಡೆಸಿದರು.
ನ್ಯಾಷನಲ್ ಸೌಥ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಅಸೋಸಿಯೇಷನ್ ತಮಿಳುನಾಡು ಘಟಕದ ಅಧ್ಯಕ್ಷ ಅಯ್ಯಾಕಣ್ಣು ಅವರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.
ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಕುರುವೈ ಬೆಳೆಯನ್ನು ಉಳಿಸಿಕೊಳ್ಳಲು ಕಾವೇರಿ ನೀರಿನ ಹಂಚಿಕೆಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.
ರವಿವಾರವೂ ಇಲ್ಲಿ ರೈತರ ಗುಂಪೊಂದು ಮಾನವ ತಲೆಬುರುಡೆ ಮತ್ತು ಮೂಳೆಗಳನ್ನು ಹಿಡಿದುಕೊಂಡು ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು.