×
Ad

ತೆಲಂಗಾಣ ವಿಧಾನಸಭಾ ಚುನಾವಣೆ: ಮೂವರು ಬಿಜೆಪಿ ಸಂಸದರಿಗೆ ಸೋಲು

Update: 2023-12-03 22:21 IST

 ಬಂಡಿ ಸಂಜಯಕುಮಾರ್ | Photo: PTI 

ಹೈದರಾಬಾದ್: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ ಎಲ್ಲ ಮೂರೂ ಸಂಸದರು ಸೋಲನ್ನಪ್ಪಿದ್ದಾರೆ. ಬಿಜೆಪಿಯ ಸಂಸದ ಹಾಗೂ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯಕುಮಾರ್, ಡಿ.ಅರವಿಂದ ಮತ್ತು ಸೋಯಂ ಬಾಪುರಾವ್ ಅವರು ಬಿಆರ್‌ಎಸ್  ಅಭ್ಯರ್ಥಿಗಳಿಂದ ಪರಾಭವಗೊಂಡಿದ್ದಾರೆ. 

ವಿವಾದಾತ್ಮಕ ಶಾಸಕ ಟಿ.ರಾಜಾ ಸಿಂಗ್ ಹೈದರಾಬಾದ್ ನಗರದಲ್ಲಿ ಗೆಲುವು ಸಾಧಿಸಿರುವ ಏಕೈಕ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು ಘೋಷಮಹಲ್ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆದ್ದಿದ್ದಾರೆ.

ಸೋದರರ ಗೆಲುವು:

ಕಾಂಗ್ರೆಸ್ನ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿಯವರು ಮನುಗೋಡ ಕ್ಷೇತ್ರದಿಂದ ಮತ್ತು ಅವರ ಸೋದರ ಕೋಮಟಿರೆಡ್ಡಿ ವಂಕಟರೆಡ್ಡಿ ನಲ್ಗೊಂಡಾ ಕ್ಷೇತ್ರದಿಂದ ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News