ಬೆಕ್ಕಿನ ಮರಿಗಳೆಂದು ಚಿರತೆ ಮರಿಗಳನ್ನು ಮನೆಗೆ ಒಯ್ದ ರೈತ!
Update: 2023-07-15 20:00 IST
Photo: Indianexpress.com
ಹರ್ಯಾಣ: ತಾಯಿಯಿಂದ ಬೇರ್ಪಟ್ಟಿದ್ದ ಎರಡು ಚಿರತೆ ಮರಿಗಳನ್ನು ರೈತರೊಬ್ಬರು ಬೆಕ್ಕಿನ ಮರಿಗಳೆಂದು ಮನೆಗೆ ತಂದ ಘಟನೆ ಹರ್ಯಾಣದಲ್ಲಿ ನಡೆದಿದೆ.
ಹರ್ಯಾಣದ ನೂಹ್ ಜಿಲ್ಲೆಯ ಕೋಟ್ಲಾ ಗ್ರಾಮದಲ್ಲಿ ರೈತರ ಕುಟುಂಬವೊಂದು ದನ ಮೇಯಿಸಲು ಹೋಗಿದ್ದಾಗ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ ಮರಿಗಳು ಅವರ ಕಣ್ಣಿಗೆ ಬಿದ್ದಿದ್ದವು. ಅವುಗಳನ್ನು ಬೆಕ್ಕಿನ ಮರಿಗಳೆಂದು ಭಾವಿಸಿದ್ದ ರೈತರು ಮನೆಗೆ ಒಯ್ದಿದ್ದಾರೆ.
ಮನೆಯಲ್ಲಿ ಅವುಗಳಿಗೆ ಹಾಲು ಕುಡಿಸಿ ಲಾಲನೆ ಪಾಲನೆ ಮಾಡಿದ್ದಾರೆ. ಈ ಸಂದರ್ಭ ಗ್ರಾಮಸ್ಥರಲ್ಲೊಬ್ಬರು ಮರಿಗಳು ಬೆಕ್ಕಿನದ್ದಲ್ಲ ಬದಲಾಗಿ ಚಿರತೆಗಳದ್ದು ಎಂದು ಕಂಡುಹಿಡಿದಿದ್ದಾರೆ.
ವಿಷಯ ಗೊತ್ತಾದ ಬಳಿಕ ಮರಿಗಳನ್ನು ಸುರಕ್ಷಿತವಾಗಿ ಮನೆಯಲ್ಲೇ ಇರಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಮರಿಗಳನ್ನು ಒಯ್ದಿದ್ದಾರೆ. ನಂತರ ಮರಿಗಳನ್ನು ತಾಯಿ ಚಿರತೆಯ ಬಳಿಗೆ ಬಿಡಲಾಗಿದೆ.