×
Ad

ಉತ್ತರ ಪ್ರದೇಶ | ಬಿಜೆಪಿ ಶಾಸಕನಿಗೆ ಕಪಾಳ ಮೋಕ್ಷ ಮಾಡಿದ ವಕೀಲನನ್ನು ಹೀರೊ ಎಂದು ಕೊಂಡಾಡಿದ ಹಿಂದೂ ಸಂಘಟನೆಗಳು

Update: 2024-10-13 21:01 IST

Photo Credit: Instagram/lawplanet_

ಲಖೀಂಪುರ್ ಖೇರಿ : ಬಿಜೆಪಿ ಶಾಸಕನಿಗೆ ಕಪಾಳ ಮೋಕ್ಷ ಮಾಡಿದ್ದ ವಕೀಲನಿಗೆ ರವಿವಾರ ಹಿಂದೂ ಬಲಪಂಥೀಯ ಸಂಘಟನೆಗಳು ಅದ್ದೂರಿ ಸ್ವಾಗತ ನೀಡಿದ್ದು, ಈ ಸಂದರ್ಭದಲ್ಲಿ ಭಾಗಿಯಾಗಿದ್ದವರು ‘ಹುಲಿ ಬಂತು, ಹುಲಿ ಬಂತು’ ಎಂದು ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ.

ಲಖೀಂಪುರ್ ಕೇರಿಯಲ್ಲಿ ಕರ್ಣಿ ಸೇನಾ ಆಯೋಜಿಸಿದ್ದ ‘ಶಸ್ತ್ರ ಪೂಜನ್’ ಕಾರ್ಯಕ್ರಮದಲ್ಲಿ ವಕೀಲ ಅವಧೇಶ್ ಸಿಂಗ್ ಗೆ ಅದ್ದೂರಿ ಸ್ವಾಗತ ಕೋರಲಾಯಿತು.

ವಕೀಲ ಅವಧೇಶ್ ಸಿಂಗ್ ರನ್ನು ಹೀರೊ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ಹಾಡಿ ಹೊಗಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ನಗರ ಸಹಕಾರ ಸಂಘದ ಮುಖ್ಯ ಕಚೇರಿಗೆ ನಾಮಪತ್ರ ಸಲ್ಲಿಕೆಗೆಂದು ಅಕ್ಟೋಬರ್ 9ರಂದು ಬಂದಿದ್ದ ಬಿಜೆಪಿ ಶಾಸಕ ಯೋಗೇಶ್ ವರ್ಮಗೆ ಕಪಾಳ ಮೋಕ್ಷ ಮಾಡಿದ್ದ ಜಿಲ್ಲಾ ಬಾರ್ ಸಂಘಟನೆಯ ಅಧ್ಯಕ್ಷ ಅವಧೇಶ್ ಸಿಂಗ್, ಸಾರ್ವಜನಿಕ ಸಂಚಲನಕ್ಕೆ ಕಾರಣರಾಗಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News