×
Ad

ರಾಹುಲ್ ಗಾಂಧಿ ನೆರವಿನಿಂದ ಸ್ವಂತ ಬ್ರಾಂಡ್ ಆರಂಭಕ್ಕೆ ಉತ್ತರ ಪ್ರದೇಶದ ಚಮ್ಮಾರ ಸಿದ್ಧತೆ

Update: 2025-03-09 20:50 IST

ರಾಹುಲ್ ಗಾಂಧಿ | PC : X\ @RahulGandhi

ಲಕ್ನೋ: ಉತ್ತರಪ್ರದೇಶದ ಸುಲ್ತಾನ್‌ಪುರದ ಚಮ್ಮಾರ ರಾಮ್‌ಚೇತ್ ತನ್ನದೇ ಆದ ‘ರಾಮ್‌ಚೇತ್ ಮೋಚಿ’ ಬ್ರಾಂಡ್ ಆರಂಭಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ರಾಮ್‌ಚೇತ್‌ರ ಈ ಸಾಧನೆಯ ಹಿಂದಿರುವವರು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ರಾಯ್‌ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ. ಅವರು ರಾಮ್‌ಚೇತ್‌ಗೆ ಒಂದು ಯಂತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಫೆಬ್ರವರಿಯಲ್ಲಿ, ರಾಹುಲ್ ಗಾಂಧಿ ರಾಮ್‌ಚೇತ್‌ರನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ದಿಲ್ಲಿ, 10 ಜನಪಥ ನಿವಾಸಕ್ಕೆ ಆಹ್ವಾನಿಸಿದ್ದರು. ಅದರಂತೆ ಅಲ್ಲಿಗೆ ಹೋಗಿದ್ದ ರಾಮ್‌ಚೇತ್, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಕೈಯಿಂದ ತಯಾರಿಸಿದ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಿದ್ದರು.

ಇತ್ತೀಚೆಗೆ ರಾಹುಲ್ ಗಾಂಧಿ ರಾಮ್‌ಚೇತ್‌ರನ್ನು ಮುಂಬೈಗೆ ಕರೆದುಕೊಂಡು ಹೋಗಿ ಖ್ಯಾತ ಚರ್ಮೋದ್ಯಮಿ ಹಾಗೂ ವಿನ್ಯಾಸ ಕಂಪೆನಿ ಚಮರ್ ಸ್ಟುಡಿಯೊದ ಮಾಲೀಕ ಸುಧೀರ್ ರಾಜಭರ್‌ಗೆ ಪರಿಚಯಿಸಿದರು. ಈ ಭೇಟಿಯು 60 ವರ್ಷದ ಸಣ್ಣ ಮಟ್ಟದ ಚಮ್ಮಾರ ರಾಮ್‌ಚೇತ್‌ರನ್ನು ಉದಯೋನ್ಮುಖ ಉದ್ಯಮಿಯನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

ತನ್ನ ಮತ್ತು ರಾಮ್‌ಚೇತ್‌ರ ಭೇಟಿಯ ಚಿತ್ರಗಳನ್ನು ರಾಹುಲ್ ಗಾಂಧಿ ಗುರುವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ರಾಮ್‌ಚೇತ್ ತನ್ನ ಮುಂಬೈ ಪ್ರವಾಸದ ಬಳಿಕ ಹೊಸ ಭರವಸೆಗಳೊಂದಿಗೆ ಬಾಬುಗಂಜ್‌ನಲ್ಲಿರುವ ತನ್ನ ಅಂಗಡಿಗೆ ಮರಳಿದ್ದರು. ತನ್ನ ಉತ್ಪನ್ನಗಳನ್ನು ಜಗತ್ತಿನಾದ್ಯಂತದ ದೇಶಗಳಿಗೆ ರಫ್ತು ಮಾಡುವ ರಾಜ್‌ಭರ್‌ರ ಚರ್ಮ ಉದ್ಯಮದಿಂದ ಅವರು ಗಾಢವಾಗಿ ಪ್ರಭಾವಿತರಾಗಿದ್ದರು.

‘‘ಅಲ್ಲಿ ನಾನು ಚೀಲಗಳು ಮತ್ತು ಚಪ್ಪಲಿಗಳ ಹೊಸ ವಿನ್ಯಾಸಗಳನ್ನು ನೋಡಿದೆ. ಹೆಚ್ಚಿನ ಉತ್ಪನ್ನಗಳಲ್ಲಿ ಮರ ಮತ್ತು ರಬ್ಬರ್ ಬಳಸಲಾಗಿತ್ತು. ನಾನು ಪರ್ಸ್‌ಗಳನ್ನೂ ತಯಾರಿಸಿದೆ ಮತ್ತು ಯಂತ್ರ ಆಧಾರಿತ ವಿನ್ಯಾಸಗಳೊಂದಿಗೆ ಪ್ರಯೋಗಗಳನ್ನು ನಡೆಸಿದೆ. ರಾಹುಲ್ ಗಾಂಧಿ ಮತ್ತು ಸುಧೀರ್ ರಾಜ್‌ಭರ್ ನನ್ನ ನೈಪುಣ್ಯವನ್ನು ಪ್ರಶಂಸಿಸಿದರು ಮತ್ತು ನನ್ನ ಕೆಲಸವನ್ನು ಮುಂದಿನ ಹಂತಕ್ಕೆ ಒಯ್ಯುಂವಂತೆ ಪ್ರೇರಣೆ ನೀಡಿದರು’’ ಎಂದು ರಾಮ್‌ಚೇತ್ ಹೇಳಿದರು.

ಅವರು ಈಗ ತನ್ನ ಕೌಶಲವನ್ನು ಮಗನಿಗೆ ಕಲಿಸುತ್ತಿದ್ದಾರೆ ಮತ್ತು ತನ್ನದೇ ಆದ ‘ರಾಮ್‌ಚೇತ್ ಮೋಚಿ’ ಬ್ರಾಂಡ್ ಸ್ಥಾಪನೆಗೆ ದೃಢ ನಿರ್ಧಾರ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News