×
Ad

ಉತ್ತರ ಪ್ರದೇಶ: ದಲಿತ ಮಹಿಳೆಯ ಅತ್ಯಾಚಾರಗೈದು ಕೊಲೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್

Update: 2024-01-02 22:12 IST

ಸಾಂದರ್ಭಿಕ ಚಿತ್ರ

ಲಕ್ನೊ: ಕಾನ್ಸ್ಟೇಬಲ್ ಓರ್ವ ದಲಿತ ಮಹಿಳೆಯ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಹತ್ಯೆಗೈದ ಆಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಮಂಗಳವಾರ ನಡೆದಿದೆ.

ಉತ್ತರಪ್ರದೇಶದ ಹಮೀರ್ಪುರ ಜಿಲ್ಲೆಯ ನಿವಾಸಿಯಾಗಿದ್ದ ಮಹಿಳೆ ಗುರುಗ್ರಾಮದ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಝಾನ್ಸಿ ಮೂಲದವನಾದ ಕಾನ್ಸ್ಟೇಬಲ್ 27 ವರ್ಷದ ರಾಘವೇಂದ್ರ ಸಿಂಗ್ ಆಗ್ರಾದ ಬೆಳನ್ಗಂಜ್ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸುತ್ತಿದ್ದ. ರಾಘವೇಂದ್ರ ಸಿಂಗ್ ಹಾಗೂ ಮಹಿಳೆ ಕೆಲವು ದಿನಗಳ ಹಿಂದೆ ಪರಿಚಿತರಾಗಿದ್ದರು. ರಾಘವೇಂದ್ರ ಸಿಂಗ್ ಆಕೆಯನ್ನು ಭೇಟಿಯಾಗಲು ಆಗ್ರಾದಲ್ಲಿರುವ ತನ್ನ ಕೊಠಡಿಗೆ ಕರೆಸಿಕೊಂಡಿದ್ದ. ಅನಂತರ ಆಕೆಯ ಶವ ರಾಘವೇಂದ್ರ ಸಿಂಗ್ ನ ಕೊಠಡಿಯಲ್ಲಿ ಪತ್ತೆಯಾಗಿತ್ತು ಸಹಾಯಕ ಆಯುಕ್ತರಾದ ಆರ್.ಕೆ. ಸಿಂಗ್ ತಿಳಿಸಿದ್ದಾರೆ.

ದಲಿತ ಮಹಿಳೆಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ 27 ವರ್ಷದ ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರ ಸಿಂಗ್ ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News