×
Ad

ಉತ್ತರಾಖಂಡ | ಪ್ರಪಾತಕ್ಕುರುಳಿದ ದಿಬ್ಬಣದ ಬಸ್, 30 ಜನರು ಮೃತ್ಯು

Update: 2024-10-05 20:31 IST

ಸಾಂದರ್ಭಿಕ ಚಿತ್ರ

ಹರಿದ್ವಾರ : ಮದುವೆ ದಿಬ್ಬಣವನ್ನು ಸಾಗಿಸುತ್ತಿದ್ದ ಬಸ್ಸೊಂದು 200 ಅಡಿ ಆಳದ ಪ್ರಪಾತಕ್ಕೆ ಉರುಳಿದ ಪರಿಣಾಮ ಕನಿಷ್ಠ 30 ಜನರು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಉತ್ತರಾಖಂಡದ ಪೌಡಿ ಗಡ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದೆ.

ಹರಿದ್ವಾರ ಜಿಲ್ಲೆಯ ಲಾಲ್ಧಂಗ್‌ನಿಂದ ಪೌಡಿ ಗಡ್ವಾಲ್ ಜಿಲ್ಲೆಯ ಬಿರೋನಖಾಲ್‌ಗೆ ಸಾಗುತ್ತಿದ್ದ ಬಸ್ ರಾತ್ರಿ ಎಂಟು ಗಂಟೆಯ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಪ್ರಪಾತಕ್ಕೆ ಉರುಳಿದೆ. ಬಸ್ಸಿನಲ್ಲಿ 50ರಿಂದ 55 ಜನರಿದ್ದರು ಎನ್ನಲಾಗಿದ್ದು, ಹೆಚ್ಚಿನವರು ಮೃತಪಟ್ಟಿದ್ದಾರೆ. ಇತರರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ವಧುವಿನ ಮನೆಯಿಂದ ಕೇವಲ ಎರಡು ಕಿ.ಮೀ.ಅಂತರದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್ ಸಿಬ್ಬಂದಿಗಳು ಬದುಕುಳಿದವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News