×
Ad

ಉತ್ತರಾಖಂಡ: ಮೊದಲ ಬಾರಿಗೆ ಜೋಶಿಮಠದ ಐದು ಗ್ರಾಮಗಳಿಗೆ ರಸ್ತೆ ಸಂಪರ್ಕ ಭಾಗ್ಯ

Update: 2024-02-21 19:40 IST

Photo: newindianexpress.com 

ಡೆಹ್ರಾಡೂನ್: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೋಶಿಮಠ ಬ್ಲಾಕ್ ನ ಐದು ಗ್ರಾಮಗಳ ನಿವಾಸಿಗಳು ತಮ್ಮ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದ್ದಾರೆ.

ತಮ್ಮ ಗ್ರಾಮಗಳಿಗೆ ರಸ್ತೆ ಸಂಪರ್ಕಕ್ಕಾಗಿ ನಿರಂತರವಾಗಿ ಆಗ್ರಹಿಸುತ್ತಿದ್ದ ಗ್ರಾಮಸ್ಥರು ಸುದೀರ್ಘ ಕಾಲದಿಂದ ಆಂದೋಲನದಲ್ಲಿ ತೊಡಗಿದ್ದರು. ರಸ್ತೆ ನಿರ್ಮಾಣವು ಈ ಗ್ರಾಮಗಳಲ್ಲಿಯ ಸುಮಾರು 1,000 ನಿವಾಸಿಗಳಿಗೆ ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಿದೆ.

ಪಾಖಿ-ಹ್ಯುನಾ-ಲಾಂಜಿ-ಪೋಖಾನಿ-ದ್ವೆಯಿಂ ತಪೋನ್ ರಸ್ತೆಯ ಬಹುನಿರೀಕ್ಷಿತ ನಿರ್ಮಾಣ ಆರಂಭಗೊಳ್ಳುತ್ತಿರುವುದನ್ನು ಅಧಿಕೃತ ಮೂಲಗಳು ದೃಢಪಡಿಸಿವೆ. ನಿರ್ಮಾಣ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ಈ ಗ್ರಾಮಗಳಲ್ಲಿಯ ಹಿರಿಯರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಅಗತ್ಯ ಸಾಮಗ್ರಗಳನ್ನು ಹೊತ್ತುಕೊಂಡು ಕಿ.ಮೀ.ಗಳಷ್ಟು ದೂರ ನಡೆಯುತ್ತಿದ್ದನ್ನು ನೆನಪಿಸಿಕೊಂಡಿದ್ದಾರೆ. ಬದುಕಿನ ಇಳಿಸಂಜೆಯಲ್ಲಾದರೂ ತಮ್ಮ ಗ್ರಾಮಗಳಿಗೆ ರಸ್ತೆ ಸಂಪರ್ಕ ಲಭಿಸುತ್ತಿರುವುದಕ್ಕೆ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News