×
Ad

ಮತಗಳ್ಳತನ: ಪುರಾವೆಯಿದ್ದಲ್ಲಿ ರಾಹುಲ್ ಚುನಾವಣಾ ಆಯೋಗವನ್ನು ಸಂಪರ್ಕಿಸಲಿ: ರಾಜನಾಥ್ ಸಿಂಗ್

Update: 2025-11-08 23:05 IST

ರಾಜನಾಥ್ ಸಿಂಗ್ , ರಾಜ್‌ನಾಥ್ ಸಿಂಗ್ | PC : NDTV

ಪಾಟ್ನಾ,ನ.10: ಬಿಹಾರದಲ್ಲಿ ವೋಟ್ ಚೋರಿ (ಮತಗಳ್ಳತನ) ನಡೆದಿದೆಯೆಂಬ ರಾಹುಲ್‌ಗಾಂಧಿ ಅವರ ಆರೋಪ ಆಧಾರರಹಿತವೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ತಿಳಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ರಾಹುಲ್ ಬಳಿ ಪುರಾವೆಯಿದ್ದಲ್ಲಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಬಹುದೆಂದು ತಿಳಿಸಿದ್ದಾರೆ.

ರೋಹ್ಟಾಸ್ ಜಿಲ್ಲೆಯಲ್ಲಿ ಎರಡು ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್‌ನಾಥ್ ಸಿಂಗ್ ಅವರು ಕಾಂಗ್ರೆಸ್‌ ಗೆ ಮಾತನಾಡಲು ವಿಷಯಗಳ ಕೊರತೆಯಿರುವುದರಿಂದ ಇಂತಹ ಆರೋಪಗಳನ್ನು ಹೊರಿಸುತ್ತಿದೆ ಎಂದು ವ್ಯಂಗ್ಯವಾಡಿದರು.

‘‘ ಒಂದು ವೇಳೆ ರಾಹುಲ್ ಗಾಂಧಿ , ಬಿಹಾರದಲ್ಲಿ ಮತಗಳ್ಳತನ ನಡೆದಿದೆಯೆಂದು ಭಾವಿಸಿದ್ದಲ್ಲಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಆದರೆ ಅವರು ಹಾಗೆ ಮಾಡುತ್ತಿಲ್ಲ. ಅವರು ಸಾಂವಿಧಾನಿಕ ಸಂಸ್ಥೆಯೊಂದರ ವಿರುದ್ಧ ಸುಮ್ಮನೆ ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದ್ದಾರೆ. ರಾಹುಲ್ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ’’ ಎಂದು ರಾಜನಾಥ್ ಹೇಳಿದರು.

ಕಾಂಗ್ರೆಸ್ ವಿಭಜನವಾದಿ ರಾಜಕಾರಣದಲ್ಲಿ ನಂಬಿಕೆಯಿರಿಸಿದ್ದು, ಜಾತಿ, ಪಂಗಡ ಹಾಗೂ ಧರ್ಮದ ಆಧಾರದಲ್ಲಿ ಜನರ ನಡುವೆ ಒಡಕು ಮೂಡಿಸುತ್ತಿದೆ ಎಂದು ರಾಜನಾಥ್ ಆಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News