×
Ad

ದಿಲ್ಲಿ ವಿವಿಗೆ ಮೋದಿ ಭೇಟಿಯ ಮುನ್ನ ನಮ್ಮನ್ನು ದಿಗ್ಬಂಧನದಲ್ಲಿ ಇರಿಸಲಾಗಿತ್ತು:AISA ಕಾರ್ಯಕರ್ತರ ಆರೋಪ

Update: 2023-06-30 22:00 IST

Narendra Modi ( PTI)

 ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿ ವಿವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರನ್ನು ಅವರ ಫ್ಲ್ಯಾಟ್ ಗಳಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿತ್ತು ಮತ್ತು ಹೊರಗೆ ಹೋಗಲು ಅವಕಾಶ ನೀಡಿರಲಿಲ್ಲ ಎಂದು ಸಿಪಿಐ-ಎಂಎಲ್ ವಿದ್ಯಾರ್ಥಿ ಘಟಕ ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್ (AISA) ಶುಕ್ರವಾರ ಆರೋಪಿಸಿದೆ.

ಆದರೆ, ಯಾವುದೇ ವಿದ್ಯಾರ್ಥಿಯನ್ನು ದಿಗ್ಬಂಧನದಲ್ಲಿ ಇರಿಸಲಾಗಿರಲಿಲ್ಲ ಎಂದು ಹಿರಿಯ ದಿಲ್ಲಿ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

‘ಪ್ರಧಾನಿ ಭೇಟಿಯ ಕಾರಣವನ್ನು ಉಲ್ಲೇಖಿಸಿ ನನ್ನನ್ನು ಮತ್ತು ಎಐಎಸ್ಎ ದಿಲ್ಲಿ ವಿವಿ ಕಾರ್ಯದರ್ಶಿ ಅಂಜಲಿಯನ್ನು ನಮ್ಮ ಫ್ಲ್ಯಾಟ್ ಗಳಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ ಮತ್ತು ಕ್ಯಾಂಪಸ್ ತೆರಳಲು ಅವಕಾಶ ನೀಡುತ್ತಿಲ್ಲ ’ ಎಂದು ಎಐಎಸ್ಎ ದಿಲ್ಲಿ ಅಧ್ಯಕ್ಷ ಅಭಿಜ್ಞಾನ ಹೇಳಿದರು.

‘ನಮಗೆ ಯಾವುದೇ ವಾರಂಟ್ ಅಥವಾ ಆದೇಶವನ್ನು ತೋರಿಸಲಾಗಿಲ್ಲ. ಅವರು ಎಷ್ಟು ಸಮಯ ಇಲ್ಲಿರುತ್ತಾರೆ ಎನ್ನುವುದು ನಮಗೆ ತಿಳಿದಿಲ್ಲ ಎಂದು ಹೇಳಿದ ಅಭಿಜ್ಞಾನ,ತಮ್ಮ ಫ್ಲ್ಯಾಟ್ ಗಳ ಹೊರಗೆ ಪೊಲೀಸ್ ಸಮವಸ್ತ್ರದಲ್ಲಿ ಕುಳಿತಿದ್ದ ಜನರ ಎರಡು ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಶುಕ್ರವಾರ ದಿಲ್ಲಿ ವಿವಿಯ ಶತಾಬ್ದಿ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. ಬೆಳಿಗ್ಗೆ ಉತ್ತರ ಕ್ಯಾಂಪಸ್ ತಲುಪಲು ಅವರು ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News