×
Ad

ಕೊಲ್ಕತ್ತಾ: ಅತ್ಯಾಚಾರ ಸಂತ್ರಸ್ತೆ ವೈದ್ಯೆಯ ಕಣ್ಣಲ್ಲಿ ರಕ್ತ ಬಂದಿದ್ದೇಕೆ? ಅಟಾಪ್ಸಿ ವರದಿಯಿಂದ ಬಹಿರಂಗ

Update: 2024-08-13 08:09 IST

ಆರೋಪಿ ಸಂಜಯ್ ರಾಯ್ (PC:NDTV)

ಕೊಲ್ಕತ್ತಾ: ನಗರದ ಆರ್.ಜಿ.ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಹೊರಬಿದ್ದಿವೆ. ಆರೋಪಿ ಸಂಜಯ್ ರಾಯ್ ಎಷ್ಟು ಬಲವಾಗಿ  ವೈದ್ಯೆಯನ್ನು ಹೊಡೆದಿದ್ದಾನೆ ಎಂದರೆ ವೈದ್ಯೆ ಧರಿಸಿದ್ದ ಕನ್ನಡಕ ಪುಡಿ ಪುಡಿಯಾಗಿದೆ. ಈ ಗಾಜಿನ ಚೂರುಗಳು ಆಕೆಯ ಕಣ್ಣಿಗೆ ಚುಚ್ಚಿ ಕಣ್ಣಿನಲ್ಲಿ ರಕ್ತ ಸೋರುತ್ತಿತ್ತು ಎಂಬ ಅಂಶವನ್ನು ಮರಣೋತ್ತರ ಪರೀಕ್ಷೆ ಹಾಗೂ ಅಟಾಪ್ಸಿ ವರದಿ ಬಹಿರಂಗಪಡಿಸಿದೆ.

ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಲಾಗಿದೆ. ವೈದ್ಯೆ ಮೃತಪಟ್ಟಿರುವುದು ಆತ್ಮಹತ್ಯೆಯಿಂದಲ್ಲ ಎಂಬ ಸುಳಿವನ್ನು ಆರಂಭಿಕ ಅಟಾಪ್ಸಿ ವರದಿ ನೀಡಿದೆ.

"ವೈದ್ಯೆಯ ಎರಡೂ ಕಣ್ಣುಗಳು, ಬಾಯಿಯಿಂದ ರಕ್ತಸ್ರಾವ ಕಂಡುಬಂದಿದ್ದು, ಮುಖದ ಮೇಲೆ ಗಾಯದ ಗುರುತುಗಳಿವೆ. ವೈದ್ಯೆಯ ಮರ್ಮಾಂಗದಿಂದ ಕೂಡಾ ರಕ್ತಸ್ರಾವ ಆಗುತ್ತಿತ್ತು. ತೊಡೆ, ಎಡಕಾಲು, ಕುತ್ತಿಗೆ, ಬಲಗೈ, ಬೆರಳು, ತುಟಿಗಳ ಮೇಲೆ ಕೂಡಾ ಗಾಯದ ಗುರುತುಗಳಿವೆ" ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪಶ್ಚಿಮ ಬಂಗಾಲ ಸರ್ಕಾರ ನಡೆಸುವ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೃತದೇಹ ಆಸ್ಪತ್ರೆಯ ಸೆಮಿನಾರ್ ರೂಂನಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು. ಆಸ್ಪತ್ರೆಗೆ ಪದೇ ಪದೇ ಭೇಟಿ ನೀಡುತ್ತಿದ್ದ ಪೊಲೀಸ್ ಸ್ವಯಂಸೇವಕ ಸಂಜಯ್ರಾಯ್ ಎಂಬಾತನನ್ನು ಶನಿವಾರ ಬಂಧಿಸಲಾಗಿತ್ತು. ಈ ಕೃತ್ಯ ಎಸಗಿದ ಬಳಿಕ ಆರೋಪಿ ಪೊಲೀಸ್ ಬರಾಕ್ ಗೆ ತೆರಳಿ ಶುಕ್ರವಾರ ಬೆಳಿಗ್ಗೆ ವರೆಗೂ ನಿದ್ದೆ ಮಾಡಿದ್ದ. ಈತ ಕೊಲ್ಕತ್ತಾ ಪೊಲೀಸ್ ಇಲಾಖೆಯ ಕ್ಷೇಮ ಘಟಕದ ಸದಸ್ಯನೂ ಆಗಿದ್ದ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News