×
Ad

ರಿಯಲ್ ಮ್ಯಾಡ್ರಿಡ್ ಕೋಚ್ ಹುದ್ದೆಗೆ ಝೈನುದ್ದೀನ್ ಒಲವು

Update: 2015-12-18 11:57 IST

ಪ್ರಸ್ತುತ ರಿಯಲ್ ಮ್ಯಾಡ್ರಿಡ್‌ನ ರಿಸರ್ವ್ ಟೀಮ್‌ನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಫ್ರೆಂಚ್ ಫುಟ್ಬಾಲ್ ದಂತಕತೆ ಝೈನುದ್ದೀನ್ ಝೈದಾನ್ ರಿಯಲ್ ಮ್ಯಾಡ್ರಿಡ್‌ನ ಕೋಚ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಝೈದಾನ್ ಹಾಲಿ ಕೋಚ್ ರಫೆಲ್ ಬೆನಿಟೆಝ್ ಉತ್ತರಾಧಿಕಾರಿಯಾಗಲು ಒಲವು ತೋರಿದ್ದಾರೆ. ರಿಯಲ್ ಮ್ಯಾಡ್ರಿಡ್‌ನ ಮಾಜಿ ಸ್ಟಾರ್ ಆಟಗಾರ ಝೈದಾನ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಫ್ಲೊರೆಂಟಿನೊ ಪೆರೆಝ್ ಸಹಿತ ತಂಡದ ಎಲ್ಲ ಸದಸ್ಯರಿಂದ ಗೌರವಿಸಲ್ಪಡುತ್ತಿದ್ದಾರೆ. ಮ್ಯಾನೇಜ್‌ಮೆಂಟ್ ಕೂಡ ಅವರ ಮೇಲೆ ನಂಬಿಕೆಯಿರಿಸಿದೆ.

ನಿವೃತ್ತಿಯ ನಂತರ ಫ್ರಾನ್ಸ್ ತಂಡದಿಂದ ಕೋಚ್ ಆಫರ್ ಪಡೆದಿರುವ ಝೈದಾನ್ ಕಳೆದ ಎರಡು ವರ್ಷಗಳಿಂದ ಮ್ಯಾಡ್ರಿಡ್ ಕ್ಲಬ್‌ನ ಇಟಲಿಯ ಮಾಜಿ ಕೋಚ್ ಕಾರ್ಲೊ ಅನ್ಸೆಲೊಟ್ಟಿ ಅವರೊಂದಿಗೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿ ಸಾಕಷ್ಟು ಅನುಭವ ಪಡೆದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News