×
Ad

ಹರಿಣ ಪಡೆಗೆ ಚುಚ್ಚಿದ ಫಿನ್ ;ಇಂಗ್ಲೆಂಡ್‌ಗೆ ಭರ್ಜರಿ ಜಯ

Update: 2015-12-31 18:39 IST

ಡರ್ಬನ್, ಡಿ.30: ಇಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧ 241 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಇಲ್ಲಿನ ಕಿಂಗ್ಸ್‌ಮೆಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 416 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ ಎರಡನೆ ಇನಿಂಗ್ಸ್‌ನಲ್ಲಿ 71 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟಾಯಿತು.


  136ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕ ತಂಡ ಇಂದು ಆಟ ಮುಂದುವರಿಸಿ ಈ ಮೊತ್ತಕ್ಕೆ 38 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು


 ನಾಲ್ಕನೆ ದಿನ ಕೊನೆಗೊಂಡಾಗ 37 ರನ್ ಗಳಿಸಿ ಔಟಾಗದೆ ಉಳಿದಿದ್ದ ಎಬಿ ಡಿವಿಲಿಯರ್ಸ್‌ಈ ಮೊತ್ತಕ್ಕೆ ಒಂದು ರನ್‌ನ್ನು ಸೇರಿಸದೆ ಪೆವಿಲಿಯನ್ ಸೇರಿದರು.


ದಕ್ಷಿಣ ಆಫ್ರಿಕ ತಂಡದ ಆರಂಭಿಕ ದಾಂಡಿಗರಾದ ಡಿ.ಎಲ್ಗರ್ 40 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ನಾಯಕ ಹಾಶಿಮ್ ಅಮ್ಲ (12 ರನ್) ವೈಫಲ್ಯ ಮುಂದುವರಿಸಿದರು.ವ್ಯಾನ್ ಝಿಲ್ 33ರನ್, ಎಬಿಡಿವಿಲಿಯರ್ಸ್‌ 37 ರನ್ ಇವರನ್ನು ಹೊರತುಪಡಿಸಿದರೆ ಇತರ ಆಟಗಾರರಿಂದ ಉತ್ತಮ ಕೊಡುಗೆ ದೊರೆಯಲಿಲ್ಲ. ಜೆಪಿ ಡುಮಿನಿ ಔಟಾಗದೆ 26 ರನ್ ಗಳಿಸಿ ಹೋರಾಟ ನಡೆಸಿದರು. ಆದರೆ ಅವರ ಹೋರಾಟಕ್ಕೆ ಸಹ ಆಟಗಾರರಿಂದ ಬೆಂಬಲ ದೊರೆಯಲಿಲ್ಲ.

ಫಿನ್ 42ಕ್ಕೆ 4, ಎಂ.ಎಂ. ಅಲಿ 47ಕ್ಕೆ 3 ವಿಕೆಟ್ , ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಗೆಸ್, ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕ ತಂಡದ ಇನಿಂಗ್ಸ್‌ನ್ನು 311 ನಿಮಿಷಗಳಲ್ಲಿ ಮುಗಿಸಿದರು.

ಇತ್ತೀಚೆಗೆ ಭಾರತದ ವಿರುದ್ಧ 03-ಅಂತರದಲ್ಲಿ ಸರಣಿ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕ ತಂಡ ತವರಿನಲ್ಲಿ ಆಡುತ್ತಿದ್ದರೂ ಇನ್ನೂ ಫಾರ್ಮ್‌ಗೆ ಮರಳಿಲ್ಲಸಂಕ್ಷಿಪ್ತ ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್ 303
ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 214
ಇಂಗ್ಲೆಂಡ್ ಎರಡನೆ ಇನಿಂಗ್ಸ್ 326
 ದಕ್ಷಿಣ ಆಫ್ರಿಕ ಎರಡನೆ ಇನಿಂಗ್ಸ್ 71 ಓವರ್‌ಗಳಲ್ಲಿ ಆಲೌಟ್ 174( ಎಲ್ಗರ್ 40, ಎಬಿಡಿ ವಿಲಿಯರ್ಸ್‌ 37; ಫಿನ್ 4-42).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News