×
Ad

ಸ್ಯಾಫ್ ಟೂರ್ನಿ: ಭಾರತ ಫೈನಲ್‌ಗೆ

Update: 2015-12-31 23:45 IST

ತಿರುವನಂತಪುರ, ಡಿ.31: ಸ್ಟಾರ್ ಸ್ಟ್ರೈಕರ್ ಜೇಜೆ ಲಾಲ್‌ಪೆಕುಲ್ವಾ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಮಾಲ್ಡೀವ್ಸ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಗುರುವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಪರ ನಾಯಕ ಸುನೀಲ್ ಚೆಟ್ರಿ(25ನೆ ನಿಮಿಷ), ಜೇಜೆ(34ನೆ, 66ನೆ ನಿಮಿಷ) ಗೋಲು ಬಾರಿಸಿ ಆರು ಬಾರಿಯ ಚಾಂಪಿಯನ್ ಭಾರತ ತಂಡ ಫೈನಲ್‌ಗೆ ತಲುಪಲು ನೆರವಾದರು. ಭಾರತ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಪ್ರವಾಸಿಗರ ಪರವಾಗಿ ಅಹ್ಮದ್ ನಾಶಿದ್(45ನೆ ನಿ.) ಹಾಗೂ ಅಮ್ದಾನ್ ಅಲಿ(75ನೆ ನಿ.) ತಲಾ ಒಂದು ಗೋಲು ಬಾರಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡ ಮಾಲ್ಡೀವ್ಸ್ ವಿರುದ್ಧ 7ನೆ ಪಂದ್ಯವನ್ನು ಗೆದ್ದುಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News