ತವರಿಗೆ ಅಪರಿಚಿತರಾಗಿರುವ ಅಫ್ಘಾನಿಸ್ತಾನದ ಫುಟ್ಬಾಲ್ ಆಟಗಾರರು !

Update: 2016-01-01 18:20 GMT


ತಿರುವನಂತಪುರ, ಜ.1:ಭಾರತ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಶನಿವಾರ ಹಾಲಿ ಚಾಂಪಿಯನ್ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದ್ದು, ಆದರೆ ಅಫ್ಘಾನ ತಂಡದಲ್ಲಿರುವ ಬಹುತೇಕ ಆಟಗಾರರು ತವರಿನಲ್ಲಿ ಅಪರಿಚಿತರು.
  ಅಫ್ಘಾನಿಸ್ತಾನವು ಇತ್ತೀಚಿನ ವರ್ಷಗಳಲ್ಲಿ ವಿದೇಶಿಯರನ್ನು ತಂಡದಲ್ಲಿ ಸೇರಿಸಿಕೊಂಡು ಏಷ್ಯಾದಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅಫ್ಘಾನಿಸ್ತಾನ ತಂಡದಲ್ಲಿರುವ 20 ಆಟಗಾರರಲ್ಲಿ ಕೇವಲ 5 ಮಂದಿ ಮಾತ್ರ ಅಪ್ಘಾನಿಸ್ತಾನ ತಂಡದವರು. ಉಳಿದ 15 ಮಂದಿ ಮೂಲತ: ಅಫ್ಘಾನಿಸ್ತಾನದವರು. ಆದರೆ ಅವರೆಲ್ಲ ಬೇರೆ ಬೇರೆ ದೇಶಗಳ ಫುಟ್ಬಾಲ್‌ನಲ್ಲಿ ನೆಲೆ ಕಂಡುಕೊಂಡವರು. ತವರಿನ ಕರೆಗೆ ಸದಾ ಸ್ಪಂದಿಸುತ್ತಾರೆ.
ಯುದ್ಧ ಸಂತ್ರಸ್ತ ದೇಶವಾಗಿರುವ ಅಫ್ಘಾನಿಸ್ತಾನದಲ್ಲಿ ಫುಟ್ಬಾಲ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಇಲ್ಲದ ಕಾರಣಕ್ಕಾಗಿ ಜರ್ಮನಿ, ಯುಎಸ್‌ಎ, ಬಹರೈನ್, ಮಲೇಷ್ಯಾ ದೇಶಗಳ ಫುಟ್ಬಾಲ್ ತಂಡ ಸೇರಿ ಮಿಂಚುತ್ತಿದ್ದಾರೆ. ಅವರಲ್ಲಿ ಎಲ್ಲರೂ ದ್ವಿಪಾಸ್‌ಪೋರ್ಟ್ ಹೊಂದಿದ್ದಾರೆ.
 ಬೇರೆ ದೇಶಗಳಲ್ಲಿ ತರಬೇತಿ ಪಡೆದಿರುವ ಆಟಗಾರರನ್ನು ಒಳಗೊಂಡ ಅಫ್ಘಾನಿಸ್ತಾನ ತಂಡ ಈ ವರೆಗೆ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ವಿರುದ್ಧ ಸೆಮಿಪೈನಲ್‌ನಲ್ಲಿ 5-0 ಭರ್ಜರಿ ಜಯ ಗಳಿಸಿತ್ತು.
   
 ಭಾರತ ಫೇವರಿಟ್: ಭಾರತ ಈ ತನಕ ಆಡಿರುವ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ದ ವಿರುದ್ಧ ಜಯ ಗಳಿಸಿದ ದಾಖಲೆ ಹೊಂದಿದೆ. ಸ್ಯಾಫ್ ಟೂರ್ನಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ 4 ಬಾರಿ ಮುಖಾಮುಖಿಯಾಗಿತ್ತು. ಇದರಲ್ಲಿ 2 ಬಾರಿ ಭಾರತ ಜಯ ಗಳಿಸಿದೆ. ಒಂದರಲ್ಲಿ ಸೋಲು ಮತ್ತು ಒಂದು ಪಂದ್ಯ ಡ್ರಾಗೊಂಡಿತ್ತು. 2009ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸ್ಯಾಫ್ ಟೂರ್ನಮೆಂಟ್‌ನಲ್ಲಿ ಭಾರತ 1-0 ಅಂತರದಲ್ಲಿ ಅಫ್ಘಾನಿಸ್ತಾನ ವಿರುದ್ಧ ಜಯ ಗಳಿಸಿತ್ತು. 2011ರಲ್ಲಿ ನಡೆದ ಫೈನಲ್‌ನಲ್ಲಿ 4-0 ಅಂತರದಲ್ಲಿ ಭಾರತ ಜಯ ಗಳಿಸಿತ್ತು. ನೇಪಾಲದಲ್ಲಿ 2013ರಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ 2-0 ಅಂತರದಲ್ಲಿ ಆಘಾತ ನೀಡಿತ್ತು.
 2013ರಲ್ಲಿ ಜಯ ಗಳಿಸಿದ ಅಫ್ಘಾನಿಸ್ತಾನ ತಂಡದ ಏಳು ಆಟಗಾರರು ಫುಟ್ಬಾಲ್‌ನಿಂದ ದೂರವಾಗಿದ್ದಾರೆ. ಕೆಲವು ಪ್ರಮುಖ ಆಟಗಾರರು ತಂಡದಲ್ಲಿ ಇಲ್ಲ. ’’ ಎಂದು ತಂಡದ ಕೋಚ್ ಪೀಟರ್ ಸೆಗರ್ಟ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News