ಗುಲಾಬಿ ಬಣ್ಣದ ಚೆಂಡು ಬಳಕೆಗೆ ಪಾಕ್ ನಿರ್ಧಾರ

Update: 2016-01-02 18:15 GMT

ಕರಾಚಿ, ಜ.2: ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಸಂಭಾವ್ಯ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಗುಲಾಬಿ ಬಣ್ಣದ ಚೆಂಡು ಬಳಸಲು ಉದ್ದೇಶಿಸಿದೆ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

‘‘ನಾವು 2011ರ ಪ್ರೀಮಿಯರ್ ಪ್ರಥಮ ದರ್ಜೆ ಕ್ರಿಕೆಟ್ ಫೈನಲ್‌ನಲ್ಲಿ ಕಿತ್ತಳೆ ಬಣ್ಣದ ಚೆಂಡನ್ನು ಬಳಸುವ ಮೂಲಕ ಪ್ರಯೋಗ ನಡೆಸಿದ್ದೆವು. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲು ಪಿಂಕ್ ಚೆಂಡು ಬಳಸಲು ಬಯಸಿದ್ದೇವೆ’’ ಎಂದು ಪಿಸಿಬಿ ಸಮಿತಿಯ ಮುಖ್ಯಸ್ಥ ಶಕೀಲ್ ಶೇಖ್ ಎಎಫ್‌ಪಿಗೆ ತಿಳಿಸಿದ್ದಾರೆ.

ಪಾಕಿಸ್ತಾನ ಈಗಾಗಲೇ ಆಸ್ಟ್ರೇಲಿಯದಿಂದ ಪಿಂಕ್ ಚೆಂಡನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್‌ಗಳ ನಡುವೆ ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯವನ್ನು ವೀಕ್ಷಿಸಲು ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿದ್ದರು.

ಪಾಕ್‌ನ ಟೆಸ್ಟ್ ಕ್ರಿಕೆಟ್ ತಂಡದಲ್ಲಿರುವ ಮುಹಮ್ಮದ್ ಹಫೀಝ್, ಅಝರ್ ಅಲಿ, ಉಮರ್ ಅಕ್ಮಲ್, ಮುಹಮ್ಮದ್ ರಿಝ್ವಿನ್, ಶಾನ್ ಮಸೂದ್, ವಹಾಬ್ ರಿಯಾಝ್ ಹಾಗೂ ಎಹ್ಸಾನ್ ಆದಿಲ್ ಪ್ರೀಮಿಯರ್ ಪ್ರಥಮ ದರ್ಜೆ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News