ಪಿಬಿಎಲ್‌ನಿಂದ ಸೈನಾ ಔಟ್

Update: 2016-01-02 18:19 GMT

ಮುಂಬೈ, ಜ.2: ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಕಾಲು ನೋವಿನ ಕಾರಣ ಶನಿವಾರ ಇಲ್ಲಿ ಆರಂಭವಾದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ (ಪಿಬಿಎಲ್) ಆತಿಥೇಯ ಮುಂಬೈ ರಾಕೆಟ್ಸ್ ವಿರುದ್ಧದ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದಾರೆ. ಸೈನಾ ಅನುಪಸ್ಥಿತಿಯಿಂದಾಗಿ ಇಲ್ಲಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ನಿರಾಸೆಗೊಂಡರು.

ವಿಶ್ವದ ನಂ.2ನೆ ಆಟಗಾರ್ತಿ ಸೈನಾ ಪಿಬಿಎಲ್‌ನಲ್ಲಿ ಅವಾಧೆ ವಾರಿಯರ್ಸ್‌ ತಂಡದಲ್ಲಿ ಆಡಬೇಕಾಗಿತ್ತು. ಮುಂಬರುವ ಒಲಿಂಪಿಕ್ಸ್ ಗೇಮ್ಸ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಸೈನಾ ಲೀಗ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

‘‘ಕಳೆದ ಕೆಲವು ವಾರಗಳಿಂದ ನನಗೆ ಕಾಲುನೋವು ಬಾಧಿಸುತ್ತಿದೆ. ಕಾಲು ನೋವು ಸ್ವಲ್ಪ ಗಂಭೀರವಾಗಿದೆ. ಇದೀಗ ತಾನು ಚೇತರಿಸಿಕೊಳ್ಳುತ್ತಿದ್ದೇನೆ’’ ಎಂದು ಸೈನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News