ಐಪಿಎಲ್‌ನಲ್ಲಿವಿರಾಟ್ ಕೊಹ್ಲಿಗೆ ಗರಿಷ್ಠಆದಾಯ

Update: 2016-01-02 18:58 GMT

 ಹೊಸದಿಲ್ಲಿ, ಜ.2: ಐಪಿಎಲ್‌ನಲ್ಲಿ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಸಂಭಾವನೆಯ ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದ್ದು, ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ 15 ಕೋಟಿ ರೂ. ಪಡೆಯುವ ಮೂಲಕ ಗರಿಷ್ಠ ಸಂಭಾವನೆ ಪಡೆಯುವ ಆಟಗಾರ ಎನಿಸಿದ್ದಾರೆ.

ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಆಟಗಾರರ ಸಂಭಾವನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರ್‌ಸಿಬಿ ತಂಡದ ಪರ ಆಡುತ್ತಿರುವ ಕೊಹ್ಲಿ 15 ಕೋಟಿ ರೂ. ಪಡೆಯುವ ಮೂಲಕ ಭಾರತದ ಸೀಮಿತ ಓವರ್‌ಗಳ ತಂಡದ ನಾಯಕ ಎಂಎಸ್ ಧೋನಿ(12.5 ಕೋ.ರೂ.) ಅವರಿಗಿಂತಲೂ ಅಧಿಕ ವೇತನ ಪಡೆಯುತ್ತಿದ್ದಾರೆ.ತ್ತೀಚೆಗೆ ನಡೆದ ಆಟಗಾರರ ಡ್ರಾಪ್ಟ್ ಪದ್ಧತಿಯ ವೇಳೆ 12.5 ಕೋ.ರೂ.ಗೆ ಪುಣೆೆ ತಂಡದ ಪಾಲಾಗಿದ್ದ ಧೋನಿಯ ವೇತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮುಂಬೈ ಇಂಡಿಯನ್ಸ್‌ನ ಹರ್ಭಜನ್ ಸಿಂಗ್(5.5ಕೋಟಿರೂ.ರಿಂದ 8 ಕೋಟಿ ರೂ.), ಅಂಬಟಿ ರಾಯುಡು(4ರಿಂದ 6 ಕೋಟಿ ರೂ.), ರಾಯಲ್ ಚಾಲೆಂಜರ್ಸ್‌ ಬೆಂಗಳೂರಿನ ಕ್ರಿಸ್ ಗೇಲ್(7.5 ಕೋ.ರೂ.ಯಿಂದ 8.40 ಕೋ.ರೂ.), ಪುಣೆ ತಂಡದ ಎಫ್‌ಡು ಪ್ಲೆಸಿಸ್(4 ಕೋಟಿರೂ.ಯಿಂದ 4.75 ಕೋ.ರೂ.) ಅವರು ವೇತನ ಏರಿಕೆಯಾದ ಆಟಗಾರರ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News