ಚೆನ್ನೈ ಓಪನ್: ಮುಖ್ಯ ಸುತ್ತಿಗೆ ಸೋಮ್‌ದೇವ್

Update: 2016-01-03 18:22 GMT

ಚೆನ್ನೈ, ಜ.3: ಚೆನ್ನೈ ಓಪನ್‌ನ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿರುವ ಸೋಮ್‌ದೇವ್ ದೇವ್‌ವರ್ಮನ್ ಮುಖ್ಯ ಡ್ರಾಗೆ ತೇರ್ಗಡೆಯಾಗಿದ್ದಾರೆ.

ರವಿವಾರ 2 ಗಂಟೆೆ, 3 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಸೋಮ್‌ದೇವ್ ಅವರು ವಾರ್ಡ್‌ರನ್ನು 2-6, 7-5, 6-4 ಸೆಟ್‌ಗಳಿಂದ ಮಣಿಸಿದರು. ಈ ಗೆಲುವಿನೊಂದಿಗೆ ಸೋಮ್‌ದೇವ್ ಟೂರ್ನಿಯ ಮುಖ್ಯ ಡ್ರಾಗೆ ತೇರ್ಗಡೆಯಾಗಿದ್ದು, ಸಹ ಆಟಗಾರ ರಾಮ್‌ಕುಮಾರ್ ರಾಮನಾಥನ್‌ರನ್ನು ಸೇರಿಕೊಂಡರು.

ಎನ್.ಶ್ರೀರಾಮ್ ಬಾಲಾಜಿ ತನ್ನ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆ್ಯಂಟೆ ಪಾವಿಕ್ ವಿರುದ್ಧ 6-7(2), 6-7(0) ಸೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರ ನಡೆದರು. ಸಾಕೇತ್ ಮೈನೇನಿ ಐದನೆ ಶ್ರೇಯಾಂಕದ ಥಾಮಸ್ ಫಾಗಿಯಾನೊ ವಿರುದ್ಧ 4-6, 2-6 ಸೆಟ್‌ಗಳಿಂದ ಸೋಲುವ ಮೂಲಕ ಕೂಟದಿಂದ ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News