ಪಾಕ್ ಬೌಲರ್ ಆಮಿರ್‌ಗೆ ಮೆಕಲಮ್ ಬೆಂಬಲ

Update: 2016-01-03 18:23 GMT

ಹ್ಯಾಮಿಲ್ಟನ್, ಜ.3: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಕಳಂಕಿತಗೊಂಡಿರುವ ಪಾಕಿಸ್ತಾನದ ವೇಗದ ಬೌಲರ್ ಮುಹಮ್ಮದ್ ಆಮಿರ್ ಮುಂದಿನ ತಿಂಗಳು ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಪಂದ್ಯಗಳಿಗೆ ಆಯ್ಕೆಯಾಗಿರುವುದನ್ನು ನ್ಯೂಝಿಲೆಂಡ್ ನಾಯಕ ಬ್ರೆಂಡನ್ ಮೆಕಲಮ್ ಸ್ವಾಗತಿಸಿದ್ದಾರೆ.

 ಆಮಿರ್ ಕಿವೀಸ್ ವಿರುದ್ಧದ ತಲಾ 3 ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಆಮಿರ್ 18ರ ಹರೆಯದಲ್ಲೇ ಸ್ಪಾಟ್ ಫಿಕಿಂಗ್ಸ್ ಪ್ರಕರಣದಲ್ಲಿ ಸಿಲುಕಿದ ಕಾರಣ 2011ರಲ್ಲಿ ಕ್ರಿಕೆಟ್‌ನಿಂದ ಐದು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು. ಲಂಡನ್‌ನಲ್ಲಿ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆಮಿರ್ ಸನ್ನಡತೆಯ ಆಧಾರದಲ್ಲಿ 3 ತಿಂಗಳಲ್ಲೇ ಜೈಲಿನಿಂದ ಬಿಡುಗಡೆಯಾಗಿದ್ದರು. ಐಸಿಸಿ ಆಮಿರ್ ವಿರುದ್ಧ ವಿಧಿಸಿದ್ದ 5 ವರ್ಷಗಳ ನಿಷೇಧವನ್ನು ಹಿಂಪಡೆದಿತ್ತು.

‘‘ಆಮಿರ್‌ಗೆ ತನ್ನ ವೃತ್ತಿಜೀವನದಲ್ಲಿ ಮುಂದುವರಿಯುವ ಅವಕಾಶ ನೀಡಬೇಕು. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾಗ ಅವರಿಗೆ ಹೆಚ್ಚು ವಯಸ್ಸಾಗಿರಲಿಲ್ಲ. ಅವರು ತಿಳಿಯದೇ ತಪ್ಪು ಮಾಡಿದ್ದಾರೆ. ಅವರು ಒಂದು ವೇಳೆ ನಮ್ಮ ವಿರುದ್ಧ ಬೌಲಿಂಗ್ ಮಾಡಿದರೆ ಅವರನ್ನು ಸ್ವಾಗತಿಸುತ್ತೇವೆ’’ಎಂದು ಮೆಕಲಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News