ನ್ಯಾ.ಲೋಧಾ ವರದಿ ಸುಪ್ರಿಂಗೆ ಸಲ್ಲಿಕೆ ;ಬಿಸಿಸಿಐ-ಐಪಿಎಲ್‌ ಬೇರ್ಪಡಿಸಲು ಸಲಹೆ

Update: 2016-01-04 11:52 GMT

ಹೊಸದಿಲ್ಲಿ, ಜ.4: ನ್ಯಾಯಮೂರ್ತಿ ಆರ್‌ಎಂ ಲೋಧಾ ಸಮಿತಿಯು ಇಂದು ಸುಪ್ರಿಂ ಕೋರ್ಟ್‌‌ಗೆ  ವರದಿ ಸಲ್ಲಿಸಿದ್ದು, ಬಿಸಿಸಿಐ ಮತ್ತು ಐಪಿಎಲ್‌ಗೆ ಬೇರೆ ಬೇರೆ ಆಡಳಿತ  ಸಮಿತಿ, ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐನ್ನು ಒಳಪಡಿಸಬೇಕು,  ಸಚಿವರು ಮತ್ತು ಸರಕಾರಿ ಅಧಿಕಾರಿಗಳಿಗೆ ಬಿಸಿಸಿಐ ನಲ್ಲಿ ಯಾವುದೇ ಹುದ್ದೆ ನೀಡಬಾರದು  ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಒಳಗೊಂಡಿದೆ.
  ಹಲವು ವಿವಾದಗಳಿಂದ ತನ್ನ ಘನತೆಯನ್ನು ಕಳೆದುಕೊಂಡಿದ್ದ ಬಿಸಿಸಿಐ ಮತ್ತೆ ತನ್ನ ಸ್ಥಾನಮಾನವನ್ನು ಪಡೆಯಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ನ್ಯಾ. ಲೋಧಾ ಸಮಿತಿಯನ್ನು ರಚಿಸಿತ್ತು. ಬಿಸಿಸಿಐ ಸುಧಾರಣೆಗೆ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿರುವ ಎಂ.ಆರ್ ಲೋಧಾ ಸಮಿತಿ ಇಂದು ಸುಪ್ರಿಂಕೋರ್ಟ್ ಗೆ ತನ್ನ ವರದಿ ಸಲ್ಲಿಸಿದೆ. ಹಲವು ಮಹತ್ವದ ಶಿಫಾರಸುಗಳನ್ನು ಸಮಿತಿ ಮಾಡಿದೆ.
ಬಿಸಿಸಿಐ ಸಿಒಒ ಸುಂದರ್ ರಾಮನ್ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಅವರು ಭ್ರಷ್ಟರಲ್ಲ ಎಂದು ಹೇಳಿರುವ ಸಮಿತಿ ಅವರ ವಿರುದ್ದ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಪ್ರತಿಯೊಂದು ರಾಜ್ಯದಿಂದ ಒಂದು ಸಂಘಟನೆ ಗೆ ಬಿಸಿಸಿಐ ಸದಸ್ಯತ್ವ ನೀಡಿ. ಆ ಸದಸ್ಯರಿಗೆ ಮತ ಚಲಾವಣೆಯ ಹಕ್ಕು ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷರು ಎರಡಕ್ಕಿಂತ ಹೆಚ್ಚು ಅವಧಿಗೆ ಅಧ್ಯಕ್ಷರಾಗಿರಬಾರದು ಎಂದು ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News