ಇಂದು ಚಾಂಡಿಲಾ, ಹಿಕನ್ ಶಾ ಭವಿಷ್ಯ ನಿರ್ಧಾರ
Update: 2016-01-04 23:13 IST
ಮುಂಬೈ, ಜ.4: ಕಳಂಕಿತ ಕ್ರಿಕೆಟಿಗರಾದ ಅಜಿತ್ ಚಾಂಡಿಲಾ ಮತ್ತು ಹಿಕನ್ ಶಾ ಅವರು ಮಂಗಳವಾರ ನಡೆಯಲಿರುವ ಬಿಸಿಸಿಐನ ಮೂವರು ಸದಸ್ಯರ ಶಿಸ್ತು ಸಮಿತಿಯ ಮುಂದೆ ಹಾಜರಾಗಬೇಕಿದೆ.
ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದ ಮೂವರು ಸದಸ್ಯರ ಬಿಸಿಸಿಐ ನ ಶಿಸ್ತು ಸಮಿತಿಯು ಇವರ ಭವಿಷ್ಯವನ್ನು ನಿರ್ಧರಿಸಲಿದೆ.
ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪಕ್ಕೆ ಸಂಬಂಧಿಸಿ ಚಾಂಡಿಲಾ ಮತ್ತು ಶಾ ಅವರು ಡಿ.4ರ ಮೊದಲು ತಮ್ಮ ಹೇಳಿಕೆಯನ್ನು ನೀಡುವಂತೆ ಬಿಸಿಸಿಐ ಆದೇಶ ನೀಡಿತ್ತು.
ಬಿಸಿಸಿಐನ ಶಿಸ್ತು ಸಮಿತಿಯಲ್ಲಿ ಶಶಾಂಕ್ ಮನೋಹರ್ ನೇತೃತ್ವದ ಶಿಸ್ತು ಸಮಿತಿಯಲ್ಲಿ ಜ್ಯೋತಿರಾದಿತ್ಯ ಸಿಂಧ್ಯಮತ್ತು ನಿರಂಜನ್ ಶಾ ಇದ್ದಾರೆ.
2013ರಲ್ಲಿ ಬೆಳಕಿಗೆ ಬಂದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಚಾಂಡಿಲಾ ಅವರು ತನ್ನ ಸಹ ಆಟಗಾರರಾದ ಶ್ರೀಶಾಂತ್ ಮತ್ತು ಅಂಕಿತ್ ಚವಾಣ್ ಜೊತೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು