ಪ್ರೀಮಿಯರ್ ಲೀಗ್; ಮುಂಬೈಯನ್ನು ಮಣಿಸಿದ ಚೆನ್ನೈ ಸ್ಮಾಶರ್ಸ್
ಮುಂಬೈ, ಜ.4: ಪ್ರೀಮಿಯರ್ ಬ್ಯಾಡ್ಮಿಟನ್ ಲೀಗ್‌ನಲ್ಲಿ ರವಿವಾರ ಚೆನ್ನೈ ಸ್ಮಾಶರ್ಸ್ ತಂಡ ಮುಂಬೈ ರಾಕೆಟ್ಸ್ ವಿರುದ್ಧ 4-3 ಅಂತರದಲ್ಲಿ ಜಯ ಗಳಿಸಿದೆ.
ಚೆನ್ನೈ ಸ್ಯಾಮರ್ಸ್ ತಂಡ ಮಿಶ್ರ ಡಬಲ್ಸ್‌ನ ಮೊದಲ ಪಂದ್ಯದಲ್ಲಿ ಗೆಲುವಿನೊಂದಿಗೆ ದಿನದ ಆಟ ಆರಂಭಿಸಿತ್ತು. ಮಿಶ್ರಡಬಲ್ಸ್‌ನಲ್ಲಿ ಸ್ಮಾಶರ್ಸ್ ತಂಡದ ಪಿಯಾ ಝೆಬಾದಿಯ್ ಮತ್ತು ಕ್ರಿಸ್ ಅಡಾಕ್ ಅವರು ಮುಂಬೈನ ಕಮಿಲ್ಲ ಜುಹ್ಲ್ ಮತ್ತು ವ್ಲಾದಿಮಿರ್ ಇವಾನೊವ್ ವಿರುದ್ಧ 15-10, 7-15. 15-11, ಅಂತರದಲ್ಲಿ ಗೆಲುವು ದಾಖಲಿಸಿ ತಂಡಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು.
ಎರಡನೆ ಪಂದ್ಯ ಪುರುಷರ ಸಿಂಗಲ್ಸ್ ಇದರಲ್ಲಿ ವಿಶ್ವದ ನಂ.20 ಆಟಗಾರ ಚೆನ್ನೈ ತಂಡದ ಪ್ರಣಾಯ್ ಅವರು ಮುಂಬೈನ ಲೆವೆರ್‌ಡೆಝ್ ವಿರುದ್ಧ 15-8, 15-11 ಅಂತರದಲ್ಲಿ ಜಯ ಗಳಿಸಿದರು.
ಮುಂಬೈನ ಮಥಾಯಿಸ್ ಬೊಯೆ ಅವರು ಚೆನ್ನೈನ ವ್ಲಾದಿಮಿರ್ ಇವಾನೊವ್ ವಿರುದ್ಧ 15-13 ಅಂತರದಲ್ಲಿ ಜಯ ಗಳಿಸಿ ಮುಂಬೈನ ಗೆಲುವಿನ ಖಾತೆ ತೆರೆದರು.ಮಾಥಾಯಿಸ್ ಮತ್ತು ವ್ಲಾದಿಮಿರ್ ಇವಾನೊವ್ ಅವರು ಎರಡು ಬೋನಸ್ ಅಂಕಗಳೊಂದಿಗೆ ತಂಡಕ್ಕೆ ಮುನ್ನಡೆಗೆ ನೆರವಾದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು ಅವರು ಹ್ಯಾನ್ ಲಿ ವಿರುದ್ಧ 15-8, 11-15, 15-8 ಅಂತರದಲ್ಲಿ ಜಯ ಗಳಿಸಿ ತಂಡದ ಮುನ್ನಡೆಗೆ ಸಹಾಯ ಮಾಡಿದರು.ಅಂತಿಮವಾಗಿ ಗುರು ಸಾಯ್‌ದತ್ ಅವರು ಎರಡು ಬೋನಸ್ ಪಾಯಿಂಟ್‌ಗಳೊಂದಿಗೆ ಮುಂಬೈನ ಸೈಮನ್ ಸಾಂಟೊಸ್ ವಿರುದ್ಧ 15-9, 15-12 ಅಂತರದಲ್ಲಿ ಜಯ ಗಳಿಸಿ ಚೆನ್ನೈಗೆ 4-3 ಅಂತರದಲ್ಲಿ ಗೆಲುವಿಗೆ ನೆರವಾದರು.